ಮಂಡ್ಯ : 420 ಯಿಂದ 671 ಆಗಿ ರಮ್ಯ ಮತದಾನ ಕ್ರಮಸಂಖ್ಯೆ ಬದಲು..? ಇಲ್ಲಿದೆ ಡೀಟೆಲ್ಸ್…

ಮಂಡ್ಯ : ಮಾಜಿ ಸಂಸದೆ ರಮ್ಯಾ ಮತದಾನ ಪಟ್ಟಿಯ ಕ್ರಮಸಂಖ್ಯೆ 420 ಇದ್ದದು 671 ಆಗಿ ಬದಲಾಗಿದೆ. ಕಳೆದ ವಿಧಾನಸಭಾ  ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿ ಸಂಸದೆ ರಮ್ಯ (ದಿವ್ಯ ಸ್ಪಂದನ) ಸಂಖ್ಯೆ 420 ಇದ್ದ ಸಂಖ್ಯೆ ಇದೀಗ ಬದಲಾಗಿದೆ.

ಸಂಬಂಧಿತ ಚಿತ್ರ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿ ಮಾಜಿ ಸಂಸದೆ ರಮ್ಯ ಕ್ರಮ ಸಂಖ್ಯೆ 420 ಇತ್ತು ಆಗ ರಮ್ಯ ಸಾಕಷ್ಟು ಇರಿಸು ಮುರಿಸುಗೊಂಡಿದ್ದರು. ಅದರಲ್ಲೂ 420 ಸಂಖ್ಯೆ ಇದ್ದ ಕಾರಣ ರಮ್ಯ ಮತದಾನವನ್ನೇ ಮಾಡಿರಲಿಲ್ಲ. ಆದರೆ ಇದೀಗ 671 ಆಗಿ ಬದಲಾವಣೆಯಾಗಿದೆ. ಮಂಡ್ಯ ನಗರದ ೧೧ ನೇ‌ ವಾರ್ಡ್ ಮತದಾರರಾಗಿರೋ ಮಾಜಿ ಸಂಸದೆ ಕು. ರಮ್ಯಾ(ದಿವ್ಯ ಸ್ಪಂದನ) ,  ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಲೀ ಮತದಾನ ಮಾಡುವ ಬಗ್ಗೆ ಕೈ ಕಾರ್ಯಕರ್ತರಲ್ಲಿ ಭರವಸೆ ಮೂಡಿಸಿದ್ದಾರೆ.

ಸ್ಥಳೀಯ ಬಿಜೆಪಿ ಮುಖಂಡರಿಂದ ರಮ್ಯಾ‌ ಮೇಲಿನ ವಾಗ್ದಾಳಿ  ಹೆಚ್ಚಾಗಿದ್ದು, ಈ ಬಾರಿಯಾದ್ರು ಮತದಾನ‌ ಮಾಡಿ ಸಂವಿಧಾನ ಕೊಟ್ಟ ಹಕ್ಕು‌ ಉಳಿಸಿಕೊಳ್ಳಿ ಎಂದು‌ ವ್ಯಂಗ್ಯ ಮಾಡಿದ್ದಾರೆ. ಆದರೆ ತನ್ನ ಪ್ರಯತ್ನವನ್ನು ಬಿಡದ ರಮ್ಯ, ಈ ಬಾರಿಯಾದ್ರು ಮಂಡ್ಯಕ್ಕೆ ಬಂದು ಮತದಾನ‌ ಮಾಡಿ ಮತದಾನಕ್ಕೆ ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದ್ರು.

Leave a Reply

Your email address will not be published.

Social Media Auto Publish Powered By : XYZScripts.com