ಕೊಡಗು ಪ್ರವಾಹ : ತವರು ಜಿಲ್ಲೆಯ ಸಂತ್ರಸ್ತರಿಗೆ ಚೆಕ್​ ವಿತರಿಸಿದ ಕಿರಿಕ್​ ಬೆಡಗಿ…!

ಮಡಿಕೇರಿ : ಕಿರಿಕ್​ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ  ತಮ್ಮ ತವರಿನಲ್ಲಾದ ಪ್ರವಾಹದಿಂದ ಜನರು ಮನೆ, ಆಸ್ತಿಪಾಸ್ತಿಯೆಲ್ಲಾ ಕಳೆದುಕೊಂಡ ನಿರಾಶ್ರಿತ ಸುಮಾರು 31 ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ಸಂಬಂಧಿತ ಚಿತ್ರ

ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ಪ್ರವಾಹ ಸಂತ್ರಸ್ತ 31 ಕುಟುಂಬಕ್ಕೆ ತಲಾ 10ಸಾವಿರ ರೂ. ಹಣ ನೀಡಿದ್ದಾರೆ ರಶ್ಮಿಕಾ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಸಹಾಯ ಮಾಡುವುದಾಗಿ ರಶ್ಮಿಕಾ ಹಾಗೂ ಅವರ ಕುಟುಂಬದವರು ಈ ವೇಳೆ ಭರವಸೆ ನೀಡಿದರು. ಹಾಗೂ ಹಾಡು ಹೇಳಲು ವೇದಿಕೆಗೆ ಬಂದು ಗಳಗಳನೆ ಕಣ್ಣೀರಿಟ್ಟ ಸಂತ್ರಸ್ತರನ್ನು ಅಪ್ಪಿಕೊಂಡು ಸಮಾಧಾನ ಮಾಡಿದರು.

ಶೂಟಿಂಗ್​ಗಾಗಿ ವಿದೇಶದಲ್ಲಿದ್ದ ರಶ್ಮಿಕಾ ಕೊಡಗಿಗೆ ಬರಲು ಸಾಧ್ಯವಿರಲಿಲ್ಲ, ಹೀಗಾಗಿ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಸಹಾಯ ಮಾಡುವುದಾಗಿ ಹೇಳಿದ್ದರಂತೆ. ಈ ಹಿಂದೆ ಸೋಶಿಯಲ್​ ಮೀಡಿಯಾದಲ್ಲಿ ಭಾವನಾತ್ಮಾಕ ಪತ್ರ ಬರೆದಿದ್ದ ರಶ್ಮಿಕಾ, ಇದೀಗ ಬಿಡುವು ಮಾಡಿಕೊಂಡು ವಿರಾಜಪೇಟೆಗೆ ಬಂದು ಜನರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com