ದೋಸ್ತಿ ಸರ್ಕಾರಕ್ಕೆ 100 ದಿನ : ಸಂಭ್ರಮದ ಹಿಂದಿದೆ ನೂರಾರು ಸವಾಲು…!

ಕರ್ನಾಟಕ : ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರ ಇವತ್ತಿಗೆ ನೂರು ದಿನಗಳನ್ನು ಪೂರ್ಣಗೊಳಿಸಿದೆ. ಆಕಸ್ಮಿಕವಾಗಿ ಸಿಎಂ ಆದ ಕುಮಾರಸ್ವಾಮಿ ನೇತೃತ್ವದಲ್ಲಿ ಮೈತ್ರಿ ಸರ್ಕಾರ ಹಲವಾರು ಸವಾಲುಗಳೊಂದಿಗೆ ಶತದಿನ ಪೂರೈಸಿದೆ.

ಅನಿರೀಕ್ಷಿತವಾಗಿ ರಾಜ್ಯದ ಅಧಿಕಾರ ಗದ್ದುಗೆ ಹಿಡಿದ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರ ಹಲವಾರು ಸವಾಲುಗಳು, ಕೆಲವು ಕ್ರಾಂತಿಕಾರಿ ಸಾಧನೆಗಳಿಗೆ ಇಂದು ಶತದಿನ ಸಂಭ್ರಮ. ಈ ಬಗ್ಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ‘ಸಮ್ಮಿಶ್ರ ಸರ್ಕಾರದ ನೂರು ದಿನಗಳ ಆಡಳಿತ ನನಗೆ ಸಂಪೂರ್ಣವಾಗಿ ತೃಪ್ತಿ ತಂದಿಲ್ಲ. ಸಾಕಷ್ಟು ಸವಾಲುಗಳನ್ನು ದಾಟಿ ಕೆಲ ತೀರ್ಮಾನಗಳನ್ನು ಮಾಡಿದ್ದೇನೆ.  ಅಂತಹ ನಿರ್ಣಯಗಳು ಸ್ವಲ್ಪದರ ಮಟ್ಟಿಗೆ ತೃಪ್ತಿ ತಂದಿದೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಜನರ ನೀರಿಕ್ಷೆಯಂತೆ ಬದಲಾವಣೆಯನ್ನು ಮಾಡಿದ್ದೇನೆ ಎನ್ನುವ ನಂಬಿಕೆಯಿದೆ’ ಎಂದು ಹೇಳಿದ್ದಾರೆ.

‘ನನಗೆ ಕಾಂಗ್ರೆಸ್ಸಿನ ಹಿರಿಯ ನಾಯಕರ ಸಹಕಾರ ಹೆಚ್ಚು ಸಿಕ್ಕಿದೆ. ಮೈತ್ರಿ ಸರ್ಕಾರದಲ್ಲಿ ಕೆಲ ಭಿನ್ನಾಭಿಪ್ರಾಯಗಳನ್ನು ಕಾಣುವುದು ಸಹಜ. ಒಂದೇ ಪಕ್ಷ ಅಧಿಕಾರ ಇದ್ದಾಗಲೂ ಸಾಕಷ್ಟು ಗೊಂದಲಗಳಿರುತ್ತವೆ. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲವೆಂದು’ ಸಿಎಂ ತಿಳಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com