ಸೂತಕದ ಮನೆಯಲ್ಲಿ ಕಳ್ಳರ ಕೈಚಳಕ : ತಂದೆಯ ತಿಥಿ ಮುಗಿಸಿ ಬಂದವರಿಗೆ ಶಾಕ್​..!

ದೊಡ್ಡಬಳ್ಳಾಪುರ : ತಂದೆ ಅಂತಿಮ ಕ್ರಿಯಾಕರ್ಮಗಳಿಗೆ ಶ್ರೀರಂಗಪಟ್ಟಣಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಕಳ್ಳತನವೆಸೆಗಿರುವ ಘಟನೆ ದೊಡ್ಡಬಳ್ಳಾಪುರದ ರಾಜಾನುಕುಂಟೆ ಬಳಿಯ ಸಿಂಗನಾಯಕನಹಳ್ಳಿ ನಾಗೇಶ್ ಬಾಂಡೋಡ್ಕರ್ ಎಂಬುವರ ಮನೆಯಲ್ಲಿ ನಡೆದಿದೆ.

ಸೂತಕದ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಮನೆಯ ಬಾಗಿಲು ಮುರಿದು 7 ಕೆ.ಜಿ.ಬೆಳ್ಳಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಕಳ್ಳರ ಕಣ್ಣಿಗೆ 600 ಗ್ರಾಂ ಚಿನ್ನದ ಡಬ್ಬಿ ಬಿದ್ದರು ಅದನ್ನು ಬರಿ ಸಾಸಿವೆ ಡಬ್ಬಿ ಎಂದುಕೊಂಡು ಒಡವೆ ಇದ್ದ ಬಾಕ್ಸ್ ​ಅನ್ನು ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ತಂದೆಯ ಅಸ್ಥಿ ವಿಸರ್ಜನೆ ಮಾಡಿ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, 600 ಗ್ರಾಂ ಚಿನ್ನ ತುಂಬಿದ್ದ ಹಳೆ ಬಾಕ್ಸ್​ನಲ್ಲಿದ್ದ  ಒಡವೆ ಸಿನಿಮೀಯ ರೀತಿ ಬಚಾವಾಗಿದ್ದು, ಮಹಿಳೆಯರ ಈ ಬುದ್ದಿವಂತಿಕೆ ಇಲ್ಲಿ ವರ್ಕೌಟ್​ ಆಗಿದೆ. ಇನ್ನು ಈ ಘಟನೆಗೆ ಸಂಬಂಧ ಪಟ್ಟಂತೆ ರಾಜಾನುಕುಂಟೆ  ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.