Cricket : ಸೌತ್‍ಹ್ಯಾಂಪ್ಟನ್‍ನಲ್ಲಿ ಇಂದಿನಿಂದ 4ನೇ ಟೆಸ್ಟ್ : ಕೊಹ್ಲಿಪಡೆಗೆ ಸಮಬಲ ಸಾಧಿಸುವ ತವಕ

ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳ ನಡುವೆ ಸೌತ್ ಹ್ಯಾಂಪ್ಟನ್ ನಲ್ಲಿರುವ ರೋಸ್ ಬೌಲ್ ಕ್ರಿಕೆಟ್ ಮೈದಾನದಲ್ಲಿ ಗುರುವಾರದಿಂದ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.

ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಕಳೆದ ಪಂದ್ಯದಲ್ಲಿ 203 ರನ್ ಅಂತರದಿಂದ ಭರ್ಜರಿ ಜಯ ಸಾಧಿಸಿ ತಿರುಗೇಟು ನೀಡಿದ್ದ ಭಾರತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದು ಸಮಬಲ ಸಾಧಿಸುವ ತವಕದಲ್ಲಿದೆ. ಅತ್ತ ತವರು ನೆಲದಲ್ಲಿ ಟೆಸ್ಟ್ ಸೋಲಿನ ಮುಖಭಂಗ ಎದುರಿಸಿದ ರೂಟ್ ನಾಯಕತ್ವದ ಆತಿಥೇಯ ಇಂಗ್ಲೆಂಡ್ ಸರಣಿ ಜಯಿಸುವ ಉದ್ದೇಶದೊಂದಿಗೆ ಕಣಕ್ಕಿಳಿಯಲಿದೆ.

ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಕೊಕ್ ನೀಡಿರುವ ಟೀಮ್ ಇಂಡಿಯಾ ಆಯ್ಕೆ ಸಮಿತಿ ಯುವ ಪ್ರತಿಭೆಗಳಾದ ಪೃಥ್ವಿ ಶಾ ಹಾಗೂ ಹನುಮ ವಿಹಾರಿಗೆ ಅವಕಾಶ ಕಲ್ಪಿಸಿದೆ. ಅತ್ತ ಇಂಗ್ಲೆಂಡ್ ಕೂಡ ತಂಡದಲ್ಲಿ ಬದಲಾವಣೆಗಳನ್ನು ಮಾಡಿದೆ. ಆಲೀ ಪೋಪ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ಕೈ ಬಿಟ್ಟು ಮೋಯಿನ್ ಅಲಿ ಹಾಗೂ ಸ್ಯಾಮ್ ಕರನ್ ಅವರನ್ನು ಸೇರಿಸಿಕೊಂಡಿದೆ.

ನಾಯಕ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ 97 ಹಾಗೂ 103 ರನ್ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ತೋರಿದ್ದರು. ಉತ್ತಮ ಫಾರ್ಮ್ ನಲ್ಲಿರುವ ಕೊಹ್ಲಿ ನಾಲ್ಕನೇ ಟೆಸ್ಟ್ ನಲ್ಲಿಯೂ ಇಂಗ್ಲೆಂಡ್ ಬೌಲರ್ ಗಳನ್ನು ಕಾಡುವ ನಿರೀಕ್ಷೆಯಿದೆ.

Leave a Reply

Your email address will not be published.

Social Media Auto Publish Powered By : XYZScripts.com