Cricket : 4ನೇ ಟೆಸ್ಟ್ : ಇಂಗ್ಲೆಂಡ್ 246 ಕ್ಕೆ ಆಲೌಟ್ – ಮಿಂಚಿದ ಟೀಮ್ ಇಂಡಿಯಾ ಬೌಲರ್ಸ್

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಸೌತ್ ಹ್ಯಾಂಪ್ಟನ್ ನ ರೋಸಬೌಲ್ ಮೈದಾನದಲ್ಲಿ ಗುರುವಾರ ನಾಲ್ಕನೇ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲಿಳಿದ ಇಂಗ್ಲೆಂಡ್ ಆರಂಭಿಕ ಆಘಾತ ಎದುರಿಸಿತು.

ಟೀಮ್ ಇಂಡಿಯಾ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 246ಕ್ಕೆ ಆಲೌಟ್ ಆಯಿತು. ಆತಿಥೇಯರ ಪರವಾಗಿ ಸ್ಯಾಮ್ ಕರನ್ 78, ಮೋಯಿನ್ ಅಲಿ 40, ಬೆನ್ ಸ್ಟೋಕ್ಸ್ 23 ರನ್ ಗಳಿಸಿ ಆಸರೆಯಾದರು.

ಭಾರತದ ಪರವಾಗಿ ಜಸ್ಪ್ರೀತ್ ಬುಮ್ರಾ 3, ಇಶಾಂತ್ ಶರ್ಮಾ 2, ಮೊಹಮ್ಮದ್ ಶಮಿ 2, ರವಿಚಂದ್ರನ್ ಅಶ್ವಿನ್ 2 ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದರು.

ಭಾರತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ.  ಆರಂಭಿಕ ಬ್ಯಾಟ್ಸಮನ್ ಗಳಾದ ಶಿಖರ್ ಧವನ್ (3*) ಹಾಗೂ ಕೆ.ಎಲ್ ರಾಹುಲ್ (11*) ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.