ದೋಸ್ತಿ ಸರ್ಕಾರದ ಸಾಧನೆ ಶೂನ್ಯ, 100 ದಿನ ಪೂರೈಸಿ ಏನೂ ಪ್ರಯೋಜನವಿಲ್ಲ : ಬಿಎಸ್​ವೈ

ಬೆಂಗಳೂರು : ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಸರ್ಕಾರ ನೂರು ದಿನ ಪೂರೈಸಿದೆ ಅಷ್ಟೇ ಆದರೆ ಅದರ ಸಾಧನೆ ಶೂನ್ಯ ಎಂದು ರಾಜ್ಯ ಸರ್ಕಾರದ ನೂರು ದಿನವನ್ನು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್​. ಯಡಿಯೂರಪ್ಪ ಟೀಕಿಸಿದ್ದಾರೆ.

bsy ಗೆ ಚಿತ್ರದ ಫಲಿತಾಂಶ

ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್​-ಜೆಡಿಎಸ್​  ದೋಸ್ತಿ ಸರ್ಕಾರಕ್ಕೆ ಇವತ್ತಿಗೆ ನೂರು ದಿನಗಳು ತುಂಬಿದೆ. ದೋಸ್ತಿ ಸರ್ಕಾರ 100 ದಿನ ಪೂರೈಸಿದೆ ಅಷ್ಟೇ ಏನೂ ಪ್ರಯೋಜನ ಇಲ್ಲ, ಶೂನ್ಯ ಸಾಧನೆ, ಸರ್ಕಾರ ಇನ್ನೂ ಟೇಕ್​ ಆಫ್​ ಆಗಿಲ್ಲ ಎಂದು ಬಿಎಸ್​ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿಎಸ್​ ವೈ, ‘ಸ್ವಾತಂತ್ರ ಭಾರತ ಇತಿಹಾಸದಲ್ಲೇ ಈ ರೀತಿ ಬೇಜವಾಬ್ದಾರಿ ಸರ್ಕಾರವನ್ನು ನಾನು ನೋಡಿಲ್ಲ, ಬರೀ ಪಕ್ಷದ ಆಂತರಿಕ ಕಚ್ಚಾಟ, ಹೊಡೆದಾಟದಲ್ಲಿಯೇ ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಮುಖಂಡರು, ಸರ್ಕಾರದ ಪ್ರತಿನಿಧಿಗಳು ಕಾಲಹರಣ ಮಾಡುತ್ತಿದ್ದಾರೆ. ಕೊಡಗಿನಲ್ಲಿ ನೆರೆಹಾನಿ ಸಂಭವಿಸಿತ್ತು, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಜನರು ಬರಗಾಲದಿಂದ ತತ್ತರಿಸುತ್ತಿದ್ದಾರೆ. ಇಷ್ಟಾದರೂ ಯಾವ ಮಂತ್ರಿಯೂ ರಾಜ್ಯ ಪ್ರವಾಸ ಮಾಡುತ್ತಿಲ್ಲ. ಜನರು ಸಂಕಷ್ಟಕ್ಕೆ ಸಿಲುಕಿರುವ, ವಿಧಾನಸೌಧದಲ್ಲಿಯೂ ಸಚಿವರು ಇಲ್ಲ. ಇವರೆಲ್ಲಾ ಏನು ಮಾಡುತ್ತಿದ್ದಾರೆ’ ಎಂದು ರಾಜ್ಯ ಸರ್ಕಾರನ್ನೂ ತರಾಟೆ ತೆಗೆದುಕೊಂಡರು.

Leave a Reply

Your email address will not be published.

Social Media Auto Publish Powered By : XYZScripts.com