ಬಂಧಿತ ಚಳುವಳಿಗಾರರಿಗೆ ಸೆಪ್ಟೆಂಬರ್ 6 ರವೆರೆಗೆ ಗೃಹಬಂಧನ : ಸುಪ್ರೀಂ ಕೋರ್ಟ್

ಪುಣೆ ಪೋಲೀಸರು ಐವರು ಚಳುವಳಿಗಾರರನ್ನು ಬಂಧನಕ್ಕೊಳಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವರುವ ಅರ್ಜಿಗೆ ಸ್ಪಂದಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ. ಸೆಪ್ಟೆಂಬರ್ 6 ರವರೆಗೆ ಬಂಧಿತ ಚಳುವಳಿಗಾರರನ್ನು ಗೃಹಬಂಧನದಲ್ಲಿರಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ಸುಧಾ ಭಾರದ್ವಾಜ್, ವರವರ ರಾವ್, ವರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರಾರಿಯಾ, ಗೌತಮ್ ನವಲಖಾ ಬಂಧಿತರಾಗಿದ್ದಾರೆ.

Image result for september 6 activist bhima koregaon

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ 5 ನ್ಯಾಯಾಧೀರ ತಂಡ ಈ ತೀರ್ಪನ್ನು ಪ್ರಕಟಿಸಿದೆ. ‘ ಐವರೂ ಬಂಧಿತರು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆ. ದೇಶಾದ್ಯಂತ ಸುಮಾರು 35 ಕಾಲೇಜುಗಳ ವಿದ್ಯಾರ್ಥಿಗಳನ್ನು ತಮ್ಮ ತಂಡದ ಸದಸ್ಯರನ್ನಾಗಿ ಸೇರಿಸಿಕೊಳ್ಳುವ ಯೋಜನೆಯಿದ್ದು, ದಾಳಿಗಳನ್ನು ನಡೆಸುವ ಉದ್ದೇಶ ಹೊಂದಿದ್ದರು ‘ ಎಂದು ಪುಣೆ ಪೋಲೀಸರ ತಂಡ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com