ಬಾಂಗ್ಲಾದೇಶ : ಮಾರಕಾಸ್ತ್ರಗಳಿಂದ ಕೊಚ್ಚಿ ಟಿವಿ ಪತ್ರಕರ್ತೆಯ ಬರ್ಬರ ಹತ್ಯೆ..!

ಟಿವಿ ಪತ್ರಕರ್ತೆಯೊಬ್ಬರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಾಂಗ್ಲಾದೇಶದಲ್ಲಿ ಬುಧವಾರ ನಡೆದಿದೆ. ಖಾಸಗಿ ಸುದ್ದಿವಾಹಿನಿ ಆನಂದ ಟಿವಿ ಹಾಗೂ ಜಾಗ್ರೊತೊ ಬಾಂಗ್ಲಾ ಹೆಸರಿನ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದ 32 ವರ್ಷದ ಸುಬರ್ಣಾ ನೋದಿ ಹತ್ಯೆಗೀಡಾಗಿದ್ದಾರೆ.

ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 150 ಕಿಲೋ ಮೀಟರ್ ದೂರವಿರುವ ಪಾಬ್ನಾ ಜಿಲ್ಲೆಯ ರಾಧಾನಗರ ಪ್ರದೇಶದ ಮನೆಯೊಂದರಲ್ಲಿ ಸುಬರ್ಣಾ ನೋದಿ ವಾಸವಾಗಿದ್ದರು. ‘ ಬೈಕ್ ಮೇಲೆ ಆಗಮಿಸಿದ ದುಷ್ಕರ್ಮಿಗಳು ಬುಧವಾರ ಬೆಳಿಗ್ಗೆ 10.45 ರ ಹೊತ್ತಿಗೆ ಮನೆಯ ಡೋರ್ ಬೆಲ್ ಒತ್ತಿದ್ದಾರೆ. ಸುಬರ್ಣಾ ಬಾಗಿಲು ತೆರೆದ ತಕ್ಷಣ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ‘ ಪೋಲೀಸ್ ಅಧಿಕಾರಿ ಇಬ್ನ್ ಮಿರ್ಜಾ ತಿಳಿಸಿದ್ದಾರೆ.

Image result for subarna nodi

ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ ಪತ್ರಕರ್ತೆ ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದ್ದಾರೆ. ಸುಬರ್ಣಾ ನೋದಿ ತಮ್ಮ 9 ವರ್ಷದ ಮಗಳನ್ನು ಅಗಲಿದ್ದಾರೆ.

Leave a Reply

Your email address will not be published.