ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ : ಸೆಪ್ಟೆಂಬರ್ 5 ರಂದು ರಾಜಭವನ ಚಲೋ ಮತ್ತು ಸಮಾವೇಶ

ಪ್ರಜಾತಂತ್ರ ಮೌಲ್ಯಗಳನ್ನು ಕಾಪಾಡಲು,‌ ನಿರ್ಭೀತಿಯ ವಾತಾವರಣ ಸೃಷ್ಟಿಸಲು ಗೌರಿ ಲಂಕೇಶ್ ಬಳಗ ಮತ್ತೆ ಮುಂದಾಗುತ್ತಿದೆ. ಪ್ರಜಾತಂತ್ರದ ಆಶೋತ್ತರದ ವಾಹಕಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ದಾಳಿ ಖಂಡಿಸಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ನಡೆಸೋದಾಗಿ ಗೌರಿಲಂಕೇಶ್ ಬಳಗದ ಪ್ರಗತಿಪರರು ತಿಳಿಸಿದ್ದಾರೆ.

ಇಂದು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಚಂದ್ರೇಗೌಡ ಸೆಪ್ಟೆಂಬರ್ ೫ ರಂದು ಗೌರಿಹತ್ಯಾ ದಿನದ ಪ್ರಯುಕ್ತ ರಾಜಭವನ ಚಲೋ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ ನಡೆಯಲಿದೆ ಎಂದಿದ್ದಾರೆ. ಇನ್ನು ಸಮಾವೇಶದಲ್ಲಿ ಪ್ರಗತಿಪರ ಹೋರಾಟಗಾರರಾದ ಶಾಸಕ ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ, ಸೇರಿದಂತೆ ದಾಬೋಲ್ಕರ್,‌ಪನ್ಸಾರೆ, ಗೌರಿ ಕುಟುಂಬ ವರ್ಗದವರು ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com