ಬೆಂಗಳೂರು : ಕೆಐಎಎಲ್ ಗೆ ಹುಸಿ ಬಾಂಬ್ ಕರೆ ಮಾಡಿದ್ದ ವ್ಯಕ್ತಿಯ ಬಂಧನ..

ಕೆಐಎಎಲ್ ನಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೊಲೀಸರಿಗೆ ನಿದ್ದೆಗೆಡಿಸಿದ್ದ ಆರೋಪಿ ಬಂಧನಕ್ಕೊಳಗಾಗಿದ್ದಾನೆ. ಉಡುಪಿ ಮಣಿಪಾಲದ ಮೂಲದ ಬೆಂಗಳೂರಿನಲ್ಲಿ ವಾಸವಿರುವ ಆದಿತ್ಯ ರಾವ್ (34) ಎಂಬಾತನನ್ನ ಬಂಧಿಸಿದ ಕೆಐಎಎಲ್ ಪೊಲೀಸರು ಬಂಧಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಎರಡು ಬಾರಿ ಟರ್ಮಿನಲ್ ಮ್ಯಾನೇಜರ್ ಗೆ ಕರೆ ಮಾಡಿ ಸ್ಪೋಟಿಸೋದಾಗಿ ಕರೆ ಮಾಡಿದ್ದ. ಈತನ ಬೆದರಿಕೆ ಕರೆಯಿಂದ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಪ್ ಪೊಲೀಸರು ಬಂದೋಬಸ್ತ್ ಹೆಚ್ಚು ಮಾಡಿದ್ದರು. ಕಳೆದ ಎರಡು ದಿನಗಳಿಂದಷ್ಟೆ ಪಾರ್ಕಿಂಗ್ ಜಾಗ ಸ್ಪೋಟಿಸೋದಾಗಿ ಆದಿತ್ಯರಾವ್ ಮೈಲ್ ಮಾಡಿದ್ದ.

ಕೊನೆಗೂ ಹುಸಿ ಬಾಂಬ್ ಕರೆ ಹಾಗೂ ಮೈಲ್ ಮಾಡಿದ್ದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಈ ಹಿಂದೆ ರೈಲ್ವೆ ಸ್ಟೇಶನ್ ಕೂಡ ಸ್ಪೋಟಿಸೋದಾಗಿ ಮೈಲ್ ಮಾಡಿದ್ದ. ಇದೀಗ ಕೆಐಎಎಲ್ ಪೊಲೀಸರ ವಶದಲ್ಲಿರುವ ಆರೋಪಿಯ ಹೆಚ್ಚಿನ ವಿಚಾರಣೆ ನಡೆಸಲಾಗಿದ್ದು, ಈತನ ಮೇಲೆ ಬೆಂಗಳೂರಿನಲ್ಲೆ ಹಲವಾರು ಕೇಸ್ಗಳಿವೆ ಎಂಬ ಮಾಹಿತಿ ದೊರೆತಿದೆ.

Leave a Reply

Your email address will not be published.

Social Media Auto Publish Powered By : XYZScripts.com