ಶ್ರೀನಗರದ ಇರಮ್ ಹಬೀಬ್ ಸಾಧನೆ – ಕಾಶ್ಮೀರದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ

ಜಮ್ಮು ಕಾಶ್ಮಿರದ ರಾಜಧಾನಿ ಶ್ರೀನಗರದಲ್ಲಿ ವಾಸಿಸುವ ಪರಿವಾರದ ಸದಸ್ಯೆ 30 ವರ್ಷದ ಇರಮ್ ಹಬೀಬ್ ಅಪ್ರತಿಮ ಸಾಧನೆಗೈದಿದ್ದಾರೆ.  ಕಮರ್ಷಿಯಲ್ ಏರ್ ಕ್ರಾಫ್ಟ್ ಹಾರಾಟ ನಡೆಸಿದ ಕಾಶ್ಮೀರದ ಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಇರಮ್ ಹಬೀಬ್ ಪಾತ್ರರಾಗಲಿದ್ದಾರೆ.

Image result for iram habib pilot

12ನೇ ತರಗತಿಯ ನಂತರ ಪೈಲಟ್ ಆಗಬೇಕೆಂಬ ಆಕಾಂಕ್ಷೆ ಹೊಂದಿರುವುದಾಗಿ ತಿಳಿಸಿದ ಇರಮ್ ಹಬೀಬ್ ಗೆ ಮೊದಮೊದಲು ಅಧೈರ್ಯದ ಮಾತುಗಳೇ ಕೇಳಿ ಬಂದವು. ಇರಮ್, ಡೆಹ್ರಾಡೂನ್ ಕಾಲೇಜಿನಲ್ಲಿ ಅರಣ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. ಬಳಿಕ ಶೇರ್-ಎ-ಕಾಶ್ಮೀರ್ ವಿಶ್ವವಿದ್ಯಾಲಯದಿಂದ ಅರಣ್ಯಶಾಸ್ತ್ರ ಭಾಗವಾದ ಕೃಷಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.

Image result for iram habib pilot

ವೈಮಾನಿಕ ಹಾರಾಟಕ್ಕೆ ಸಂಬಂಧವಿರ ಅರಣ್ಯಶಾಸ್ತ್ರವನ್ನು ಅಧ್ಯಯನ ಮಾಡಿದ್ದರೂ ಸಹ ಪೈಲಟ್ ಆಗುವ ಕನಸನ್ನು ಮಾತ್ರ ಇರಮ್ ಹಬೀಬ್ ಕೈ ಬಿಟ್ಟಿರಲಿಲ್ಲ. ಅಮೇರಿಕದ ಮಿಯಾಮಿಯಲ್ಲಿ ವಿಮಾನ ಹಾರಾಟ ತರಬೇತಿಯನ್ನು 2016 ರಲ್ಲಿ ಪೂರ್ಣಗೊಳಿಸಿದರು. ಭಾರತಕ್ಕೆ ಮರಳಿದ ನಂತರ ಕಮರ್ಷಿಯಲ್ ವಿಮಾನ ಚಲಾಯಿಸುವ ಪರವಾನಗಿಯನ್ನೂ ಸಹ ಪಡೆದುಕೊಂಡಿದ್ದಾರೆ.

ಇದೀಗ IndiGo ಹಾಗೂ GoAir ಕಂಪನಿಗಳಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುವ ಅವಕಾಶಗಳು ಒದಗಿಬಂದಿವೆ. ‘ ನಾನು ಅರಣ್ಯಶಾಸ್ತ್ರ ಅಧ್ಯಯನ ಮಾಡುವಾಗಲೂ ಸಹ ನನ್ನಲ್ಲಿ ಪೈಲಟ್ ಆಗಿ ವಿಮಾನ ಚಲಾಯಿಸುವ ಆಸೆ ಹಾಗೆಯೇ ಉಳಿದುಕೊಂಡಿತ್ತು ‘ ಎಂದು ಇರಮ್ ಹಬೀಬ್ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com