ಹೈದರಾಬಾದ್ : ರಸ್ತೆ ಅಪಘಾತದಲ್ಲಿ ತೆಲುಗು ನಟ, ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ ನಿಧನ

ತೆಲುಗು ನಟ ಹಾಗೂ ತೆಲುಗು ದೇಸಮ್ ಪಕ್ಷದ ಹಿರಿಯ ಮುಖಂಡ ನಂದಮೂರಿ ಹರಿಕೃಷ್ಣ ಮಂಗಳವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ತೆಲುಗು ದೇಸಮ್ ಪಕ್ಷದ ಸಂಸ್ಥಾಪಕ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಟಿ ರಾಮಾರಾವ್ ಅವರ ಪುತ್ರರಾಗಿದ್ದ ನಂದಮೂರಿ ಹರಿಕೃಷ್ಣ ಅವರು ತಮ್ಮ 61ನೇ ವಯಸ್ಸಿನಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ನಲಗೊಂಡ ಜಿಲ್ಲೆಯ ನರ್ಕೆಟ್ ಪಲ್ಲಿ – ಅಡ್ಡಂಕಿ ಹೆದ್ದಾರಿಯಲ್ಲಿ ರಾಜಧಾನಿ ಹೈದರಾಬಾದಿನಿಂದ 100 ಕಿಲೋ ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ನೆಲ್ಲೂರಿನಿಂದ ಹೈದರಾಬಾದಿಗೆ ವಾಪಸಾಗುವ ವೇಳೆ ಈ ದುರ್ಘಟನೆ ನಡೆದಿದೆ. ದಾರಿಹೋಕರು ಹಾಗೂ ಸ್ಥಳೀಯರು ಸೇರಿಕೊಂಡು ನಂದಮೂರಿ ಹರಿಕೃಷ್ಣ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರಾದರೂ, ಮೃತಪಟ್ಟಿರುವುದನ್ನು ವೈದ್ಯರು ಧೃಡಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com