ಹೂ ಮಾರುತ್ತಿದ್ದ ಬಾಲಕಿ ಕಂಡು ಮಿಡಿದ ಸಿಎಂ ಹೃದಯ : ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ HDK ಭರವಸೆ

ಮಂಡ್ಯ :  ಹೂ ಮಾರುತ್ತಿದ್ದ ಪುಟ್ಟ ಬಾಲಕಿಯ ಕಷ್ಟ ಕಂಡು ಸಿಎಂ ಕುಮಾರಸ್ವಾಮಿ ಹೃದಯ ಮಿಡಿದಿದೆ. ಪುಟ್ಟ ಬಾಲಕಿಯನ್ನು ಕಂಡ ಸಿಎಂ ಸ್ವಲ್ಪ ಕಾಲ ಬಾಲಕಿ ಜೊತೆ ಸಂತಸದಿಂದ ಮಾತಾಡಿದ್ದಾರೆ.

ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದ ಬಳಿ ಹೂ ಮಾರುತ್ತಿದ್ದ  ಶಾಬಾಬ್ತಾಜ್ ಎಂಬ ಪುಟ್ಟ ಬಾಲಕಿ ಕಾರಿನಲ್ಲಿ ಹೋಗುತ್ತಿದ್ದ ಕುಮಾರಸ್ವಾಮಿ ಕಣ್ಣಿಗೆ ಬಿದ್ದಳು. ಸಿಎಂ ಕುಮಾರಸ್ವಾಮಿ ತಕ್ಷಣ ಕಾರನ್ನು ನಿಲ್ಲಿಸಿ ಆ ಪುಟ್ಟ ಬಾಲಕಿಯನ್ನು ಮಾತನಾಡಿಸಿ ಆಕೆಯ ಕಷ್ಟವನ್ನು ಆಲಿಸಿ ಬಾಲಕಿಯ ಜೊತೆ ಸಂತಸದಿಂದ ಮಾತನಾಡಿಸಿದ್ದರು.

ಮನೆಯ ಸಂಕಷ್ಟ ವಿವರಿಸಿದ ಬಾಲಕಿಗೆ ಮತ್ತು ಗ್ರಾಮಸ್ಥರಿಗೆ ಬಾಲಕಿಯ ತಂದೆಗೆ ತನ್ನನ್ನು ಕಾಣುವಂತೆ ಸಿಎಂ ಹೆಚ್​ಡಿಕೆ ತಿಳಿಸಿದ್ದರು, ಇನ್ನು ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿ, ಸಿಎಂ ರಾಮನಗರಲ್ಲಿ ತೆರಳಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com