ಕುಟುಂಬ ಸಮೇತ ರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದ ದೇವೆಗೌಡರು…

ರಾಯಚೂರು : ನಿನ್ನೆಯಿಂದ  ಮಂತ್ರಾಲಯದ ರಾಯರ ಆರಾಧನೆ ಶುರುವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರು ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ವೃಂದಾವನ ದರ್ಶನ ಪಡೆದಿದ್ದಾರೆ.

ಉತ್ತರಾರಾಧನೆ ಹಿನ್ನೆಲೆ ಇಂದು ಮುಂಜಾನೆ ಪತ್ನಿ ಚೆನ್ನಮ್ಮ ಜತೆಗೆ ಮಾಜಿ ಪ್ರಧಾನಿ ರಾಯರ ವೃಂದಾವನ ದರ್ಶನ ಪಡೆದಿದ್ದಾರೆ. ದರ್ಶನ ಪಡೆದ ನಂತರ ಮಾತನಾಡಿದ ದೇವೇಗೌಡರು,  ‘ನಿನ್ನೆಯಿಂದ ರಾಯರ ಸನ್ನಿಧಾನದಲ್ಲಿದ್ದೇನೆ. ಇಂದು ಮುಂಜಾನೆ ಅಭಿಷೇಕ ವೇಳೆ ರಾಯರ ವೃಂದಾವನ ಹಾಗೂ ಸ್ವಾಮಿಗಳ ದರ್ಶನ ಪಡೆದಿರುವೆ. ರಾಯರ ದರ್ಶನ ಪಡೆದಿರುವುದು ತೃಪ್ತಿ ತಂದಿದೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published.