ಸಿದ್ದರಾಮಯ್ಯ, ಹೆಚ್​ಡಿಕೆ ನಡುವಿನ ಭಿನ್ನಾಭಿಪ್ರಾಯದಿಂದ ಆಡಳಿತ ಹದಗೆಟ್ಟಿದೆ : ಬಿಎಸ್​ ವೈ

ಬೆಂಗಳೂರು : ‘ರಾಜ್ಯದಲ್ಲಿ ಸರ್ಕಾರ ಇದೆ ಎಂದು ಯಾರಿಗೂ ಅನ್ನಿಸುತ್ತಿಲ್ಲ, ಸಿದ್ದರಾಮಯ್ಯ ಕುಮಾರಸ್ವಾಮಿ ನಡುವೆ ಭಿನ್ನಾಭಿಪ್ರಾಯವಿದೆ, ಇವರಿಬ್ಬರ ಗೊಂದಲದಿಂದ ಆಡಳಿತ ಹದಗೆಟ್ಟಿದೆ’ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದವರು  ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಎಸ್​ ಯಡಿಯೂರಪ್ಪ, ‘ರಾಜ್ಯದಲ್ಲಿ ಏಕಕಾಲಕ್ಕೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಸೃಷ್ಟಿಯಾಗಿದೆ. ಸೂಕ್ತ ಕ್ರಮ ಜರುಗಿಸಿ ಸಹಾಯ ಹಸ್ತ ಚಾಚುವಂತೆ ಯಾರನ್ನು ಕೇಳಬೇಕು ಎಂಬ ಗೊಂದಲದ ವಾತಾವರಣ ಸಮ್ಮಿಶ್ರ ಸರ್ಕಾರದಿಂದ ಸೃಷ್ಟಿಯಾಗಿದೆ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭೀಕರ, ಬರ, ಇನ್ನು ಕೆಲ ಕಡೆ ಅತಿವೃಷ್ಟಿ ಇದೆ. ಆದರೆ ವಿಧಾನ ಸೌಧದಲ್ಲಿ ಯಾವ ಸಚಿವರೂ ಸಿಗುವುದಿಲ್ಲ,  ಅವರವರೇ ಬಡಿದಾಡಿ ಸರ್ಕಾರ ಬಿದ್ರೆ ನಾವು ಹೊಣೆಯಲ್ಲ’ ಎಂದು ಬಿಎಸ್​ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

One thought on “ಸಿದ್ದರಾಮಯ್ಯ, ಹೆಚ್​ಡಿಕೆ ನಡುವಿನ ಭಿನ್ನಾಭಿಪ್ರಾಯದಿಂದ ಆಡಳಿತ ಹದಗೆಟ್ಟಿದೆ : ಬಿಎಸ್​ ವೈ

 • August 29, 2018 at 3:23 PM
  Permalink

  Thank you for some other informative web site.
  Where else could I get that kind of info written in such a perfect method?
  I have a undertaking that I am just now operating on, and I have been on the glance out for such info.

  Reply

Leave a Reply

Your email address will not be published.

Social Media Auto Publish Powered By : XYZScripts.com