ರಾಜ್ಯ ಸರ್ಕಾರದಿಂದ ನನ್ನ, ಸಿದ್ದರಾಮಯ್ಯನವರ ಫೋನ್​ ಕದ್ದಾಲಿಕೆ : ಬಿಎಸ್​ವೈ ಆರೋಪ

ಬೆಂಗಳೂರು : ರಾಜ್ಯ ಸರ್ಕಾರ ತಮ್ಮ ಫೋನ್​ ಕದ್ದಾಲಿಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ‘ನೂರಕ್ಕೆ ನೂರರಷ್ಟು ಸತ್ಯವಾಗಿ ನನ್ನ ಹಾಗೂ ನಮ್ಮ ಪಕ್ಷದ ಕೆಲವು ಮುಖಂಡರ ಫೋನ್​ ಕದ್ದಾಲಿಕೆಯಾಗುತ್ತಿದೆ. ಅಷ್ಟೇ ಅಲ್ಲ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಫೋನ್​ ಕೂಡ ಕದ್ದಾಲಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲೇ ಬೇಕು. ನಾವು ಇದನ್ನು ಯಾವುದೇ ಕಾರಣಕ್ಕೂ ಕ್ಷುಲ್ಲಕ ಎಂದು ಪರಿಗಣಿಸುವುದೇ ಇಲ್ಲ’ ಈ ಬಗ್ಗೆ ತನಿಖೆ ನಡೆಸಲೇಬೇಕು ಎಂದು  ಬಿಎಸ್​ವೈ ಕಿಡಿಕಾರಿದ್ದಾರೆ.

 

 

Leave a Reply

Your email address will not be published.