ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್..!

ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ‘ ನನಗೆ ಸೋಲಿಸಿದವರು ಬಿಜೆಪಿ ಮತ್ತು ಜೆಡಿಎಸ್ ನವರು ಅಲ್ಲಾ, ಕಾಂಗ್ರೆಸ್ ನವರೇ, ನನಗೆ ಚುನಾವಣೆಯಲ್ಲಿ ಸೋತಿದ್ದು ಬಹಳಷ್ಟು ನೋವು ಆಗಿದೆ, ಹೀಗಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ ‘ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿಕೆ ನೀಡಿದ್ದಾರೆ.

‘ ನಾನು ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೋಲಿ, ಕಬ್ಬಲಿಗ, ಅಂಬಿಗ ಸಮಾಜದವರನ್ನು ಬಿಜೆಪಿ ಗುರುತಿಸಿದೆ. ಸ್ವಾತಂತ್ರ್ಯ ಸಿಕ್ಕಿ 72 ವರ್ಷ ಆದರೂ ನಮ್ಮ ಸಮಾಜಕ್ಕೆ ಗುರ್ತಿಸಿರಲಿಲ್ಲ. ಆದ್ರೆ ಬಿಜೆಪಿಯವರು ಗುರುತಿಸಿ ರಾಮಾನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದ್ದಾರೆ, ಸಾತ್ವಿ ನಿರಂಜನ್ ಅವರನ್ನು ಕೇಂದ್ರದ ಸಚಿವೆಯನ್ನಾಗಿ ಮಾಡಿದ್ದಾರೆ ‘ ಎಂದಿದ್ದಾರೆ.

‘ ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಮತ್ತು ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಯಾವುದೇ ಆಸೆ ಇಟ್ಟಿಕೊಂಡು ಬಿಜೆಪಿ ಸೇರುತ್ತಿಲ್ಲ. ನನಗೆ ಎರಡೇ ಆಸೆ ಇರುವುದು, ಒಂದು ಗುರುಮಿಠಕಲ್ ಜನ್ರ ಸೇವೆ ಮಾಡುವುದು, ಇನ್ನೊಂದು ನಮ್ಮ ಜನಾಂಗವನ್ನು ಪ.ಪಂಗಡಕ್ಕೆ ಸೇರಿಸುವುದಕ್ಕಾಗಿ ‘ ಎಂದಿದ್ದಾರೆ.

‘ ನಾನು ಈ ಹಿಂದೆ ಎರಡು ಸಲ ಕಾಂಗ್ರೆಸ್ ನ ಮಂತ್ರಿಯಾಗಿದ್ದೆ, ಎಐಸಿಸಿ ಸದಸ್ಯನಾಗಿದ್ದೆ, ಕೆಪಿಸಿಸಿ ಸೆಕ್ರೆಟರಿ ಆಗಿದ್ದೆ. ಈಗ ನಾನು ಕಾಂಗ್ರೆಸ್ ತೊರೆದು ನಾಳೆ ಬಿಜೆಪಿ ಸೇರುತ್ತಿದ್ದೇನೆ. ನಾನು ಬಿಜೆಪಿ ಉನ್ನತ ಮಟ್ಟದ ನಾಯಕರ ಜೊತೆ ಮಾತಕತೆ ನಡೆಸಿದ್ದೇನೆ. ಕಳೆದ ವಿಧಾನಸಭಾ,ಚುನಾವಣೆಯಲ್ಲಿ ನನ್ನ ಜನಬೆಂಬಲ ನನ್ನ ವರ್ಚಸ್ಸು ನೋಡಿ, ಮತ್ತೇ ನಾನು ಚುನಾವಣೆಯಲ್ಲಿ ಗೆದ್ದರೆ ಪವರ್ ಪುಲ್ ಮಿನಿಸ್ಟರ್ ಮಿನಿ ಸ್ಟರ್ ಆಗುತ್ತೆಂದು ನಮ್ಮವರೇ ನನಗೆ ಸೋಲಿಸಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com