Asian Games : ಟ್ರಿಪಲ್ ಜಂಪ್‍ನಲ್ಲಿ ಅರ್ಪಿಂದರ್ ಗೆ ಸ್ವರ್ಣ : ಸ್ವಪ್ನಾ ಬರ್ಮನ್‍ಗೆ ಹೆಪ್ಟಾಥ್ಲಾನ್ ಚಿನ್ನ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ 11ನೇ ದಿನವಾದ ಬುಧವಾರದಂದು ಭಾರತಕ್ಕೆ ಎರಡು ಬಂಗಾರದ ಪದಕಗಳು ಲಭಿಸಿವೆ. ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಅರ್ಪಿಂದರ್ ಸಿಂಗ್ ಚಿನ್ನದ ಪದಕವನ್ನು ಜಯಿಸಿದ್ದಾರೆ.

ಅತ್ಯುತ್ತಮ ಪ್ರದರ್ಶನ ತೋರಿದ ಅರ್ಪಿಂದರ್ ಸಿಂಗ್ 16.77 ಮೀಟರ್ ಜಿಗಿಯುವ ಮೂಲಕ ಚಿನ್ನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಸ್ವಪ್ನಾ ಬರ್ಮನ್ ಅವರು ಮಹಿಳೆಯರ ಹೆಪ್ಟಾತ್ಲಾನ್ ಸ್ಪರ್ಧೆಯಲ್ಲಿ 6026 ಅಂಕಗಳನ್ನು ಪಡೆದು  ಸ್ವರ್ಣ ಪದಕವನ್ನು ಗೆದ್ದುಕೊಂಡಿದ್ದಾರೆ.

ಇದರೊಂದಿಗೆ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ 54 ನ್ನು ತಲುಪಿದೆ. ಇದರಲ್ಲಿ 11 ಚಿನ್ನ, 20 ಬೆಳ್ಳಿ ಹಾಗೂ 23 ಕಂಚಿನ ಪದಕಗಳ ಸೇರಿವೆ.

One thought on “Asian Games : ಟ್ರಿಪಲ್ ಜಂಪ್‍ನಲ್ಲಿ ಅರ್ಪಿಂದರ್ ಗೆ ಸ್ವರ್ಣ : ಸ್ವಪ್ನಾ ಬರ್ಮನ್‍ಗೆ ಹೆಪ್ಟಾಥ್ಲಾನ್ ಚಿನ್ನ

Leave a Reply

Your email address will not be published.

Social Media Auto Publish Powered By : XYZScripts.com