ಕೂಡಿ ಬಂದ ಕಂಕಣ ಭಾಗ್ಯ : ಮುರಿದು ಬಿದ್ದ ಕಾರಣ ಕೇವಲ 2 ಸೀರೆ….?

ತುಮಕೂರು : ಮಧುಮಗಳು 2 ಸೀರೆ ಹೆಚ್ಚಾಗಿ ಕೇಳಿದಳೆಂಬ ಕಾರಣಕ್ಕೆ ವರನ ಕಡೆಯವರು ಮದುವೆಯೇ ನಿಲ್ಲಿಸಿ ಹೋಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಚಿಲುಮೆ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯಬೇಕಿದ್ದ ಮದುವೆ ಕ್ಷುಲಕ ಕಾರಣಕ್ಕೆ ಮುರಿದು ಬಿದ್ದಿದೆ.  ತುರುವೇಕೆರೆಯ ಸುಮಿತ್ ಮತ್ತು ತುಮಕೂರಿನ ಚಂದ್ರಕಲಾಗೆ ಮದುವೆ ‌ನಿಶ್ಚಯವಾಗಿದ್ದು, ಯುವತಿ ಯುವಕನಿಗೆ ಪೋನ್ ಮಾಡಿ 2 ಸೀರೆ ಹೆಚ್ಚಾಗಿ ಕೊಡುವಂತೆ ಕೇಳಿದ್ದಾಳೆ ಅಷ್ಟೇ. ಅಷ್ಟಕ್ಕೆ ಮದುವೆಯೇ ಬೇಡ ಎಂದು ಯುವಕನ ಕುಟುಂಬದವರು ಕ್ಯಾತೆ ತೆಗೆದು ಮದುವೆ ನಿಲ್ಲಿಸಿದ್ದಾರೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಪೊಲೀಸ್​ ಮೇಲೆಯೂ ಹಲ್ಲೆಗೆ ಗಂಡಿನ ಕಡೆಯವರು ಮುಂದಾಗಿದ್ದಾರೆ. ಇನ್ನು ನೊಂದ ಯುವತಿ ಚಂದ್ರಕಲಾ ಕುಟುಂಬದವರು, ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

One thought on “ಕೂಡಿ ಬಂದ ಕಂಕಣ ಭಾಗ್ಯ : ಮುರಿದು ಬಿದ್ದ ಕಾರಣ ಕೇವಲ 2 ಸೀರೆ….?

Leave a Reply

Your email address will not be published.

Social Media Auto Publish Powered By : XYZScripts.com