ಕನ್ನಡ ಮತ್ತು ಮಾಜಿ ಪ್ರಧಾನಿ ದೇವೆಗೌಡರನ್ನು ಹಾಡಿ ಕೊಂಡಾಡಿದ ಉಪರಾಷ್ಟ್ರಪತಿ…?

ಮೈಸೂರು : ಯಾರೊಬ್ಬರೂ ಸಹ ತಮ್ಮ ಮಾತೃಭೂಮಿಯನ್ನು ಮರೆಯಬಾರದು. ಹೆಚ್.ಡಿ ದೇವೇಗೌಡ್ರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನವನ್ನು ಮಾತ್ರ ಬಿಡಲಿಲ್ಲ ಎಂದು ದೇವೇಗೌಡ್ರನ್ನು ಉಲ್ಲೇಖಿಸಿ  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶ್ಲಾಘನೆ ವ್ಯಕ್ತಪಡಿಸಿದರು.

ಸಂಬಂಧಿತ ಚಿತ್ರ

ಮೈಸೂರಿನ ಸುತ್ತೂರು ಮಠದಲ್ಲಿ ಜಗದ್ಗುರು ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ‘ಯಾರೋಬ್ಬರೂ ತಮ್ಮ ಮಾತೃಭೂಮಿಯನ್ನು ಮರೆಯಬಾರದು. ತಾವು ಹುಟ್ಟಿಬೆಳೆದ ಸ್ಥಳವನ್ನು ಬಿಡಬಾರದು. ಮಾಜಿ ಪ್ರಧಾನಿ ದೇವೇಗೌಡ ಅವರನ್ನೇ ನೋಡಿ. ಅವರು ಪ್ರಧಾನಿಯಾಗಿ ದೆಹಲಿಗೆ ಬಂದರೂ ಹಾಸನವನ್ನು ಮಾತ್ರ ಬಿಡಲಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಬಂಧಿತ ಚಿತ್ರ

‘ಮಾತೃಭಾಷೆ ಕಣ್ಣು ಇದ್ದಂತೆ. ಇತರ ಭಾಷೆ ಕನ್ನಡಕದಂತೆ. ಕನ್ನಡಕಕ್ಕಿಂತಲೂ ಕಣ್ಣು ಮುಖ್ಯ. ಹಾಗಾಗಿಯೇ ಸ್ಥಳೀಯ ಭಾಷೆಗಳನ್ನು ಉತ್ತೇಜಿಸಬೇಕು. ಕನ್ನಡ ಸುಂದರ ಭಾಷೆ,  ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮನೆಯಲ್ಲಿ ಕನ್ನಡ ಮಾತನಾಡಲು ಉತ್ತೇಜಿಸಬೇಕು’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡ ಭಾಷೆಯನ್ನು ಕೊಂಡಾಡಿದರು.

Leave a Reply

Your email address will not be published.

Social Media Auto Publish Powered By : XYZScripts.com