ಮೂರು ದಿನದ ಬಳಿಕ ಮತ್ತೆ ಕಾಣಿಸಿಕೊಂಡ ವರುಣ : ಕೊಡಗಿನವರಲ್ಲಿ ಆತಂಕ…!

ಕೊಡಗು : ಭಾರಿ ಮಳೆಯಿಂದ ತತ್ತರಿಸಿ ಹೋದ ಮಂಜಿನ ನಗರಿಯ ಜನರು ಮೂರು ದಿನದಿಂದ ನಿಟ್ಟುಸಿರು ಬಿಟ್ಟಿದ್ದರು, ಆದರೆ ಇಂದು ಮತ್ತೆ ವರುಣನ ದರ್ಶನವಾಗಿದ್ದು, ಜನರು ಕಂಗಾಲಾಗಿದ್ದಾರೆ.

ಕೊಡಗಿನಲ್ಲಿ ಮತ್ತೆ  ವರುಣ ಪ್ರತ್ಯಕ್ಷನಾಗಿದ್ದು,  ಜಿಲ್ಲೆಯ ಹಲವೆಡೆ ಮಧ್ಯಾಹ್ನ ಬಳಿಕ ನಿರಂತರವಾಗಿ  ಮಳೆ ಸುರಿಯುತ್ತಿದೆ. ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ, ವಿರಾಜಪೇಟೆ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು. ಮೂರು ದಿನದಿಂದ ಬಿಡುವು ನೀಡಿದ್ದ ಮಳೆರಾಯ. ಇದೀಗ ಮತ್ತೆ ಮಳೆಯಾಗುತ್ತಿರುವುದರಿಂದ ಸಂತ್ರಸ್ತರು ಆತಂಕದಲ್ಲಿದ್ದಾರೆ. ಇನ್ನು ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಸಿಬ್ಬಂದಿಗೂ ಮಳೆ ಅಡ್ಡಿಯಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com