Asian Games : ಬ್ಯಾಡ್ಮಿಂಟನ್ : ಫೈನಲ್‍ನಲ್ಲಿ ಯಿಂಗ್ ವಿರುದ್ಧ ಸೋಲು – ಸಿಂಧುಗೆ ಬೆಳ್ಳಿ ಪದಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ ಸಿಂಧು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನೀ ತೈಪೇಯಿಯ ತೈ ಜು ಯಿಂಗ್ ವಿರುದ್ಧ ಪಿ.ವಿ ಸಿಂಧು 13-21, 16-21 ಪಾಯಿಂಟ್ ಗಳಿಂದ ಸೋಲನಭವಿಸಿದ್ದಾರೆ.

34 ನಿಮಿಷಗಳವರೆಗೆ ನಡೆದ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ವಿಶ್ವ ನಂಬರ್ -1 ಆಟಗಾರ್ತಿ ತೈ ಜು ಯಿಂಗ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 23 ವರ್ಷದ ಪಿ.ವಿ ಸಿಂಧು 2 ಗೇಮ್ ನಲ್ಲಿಯೂ ಪರಾಭವಗೊಂಡು ರಜತ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಸೋಮವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ತೈ ಜು ಯಿಂಗ್ ಸೋಲನುಭವಿಸಿದ್ದ ಭಾರತದ ಸೈನಾ ನೆಹ್ವಾಲ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com