ಸಿದ್ದರಾಮಯ್ಯ ಲಂಡನ್ ಗೆ ತೆರಳಿದ ಬಳಿಕ ಸಮ್ಮಿಶ್ರ ಸರ್ಕಾರ ಬೀಳುತ್ತೆ : ಆರ್. ಅಶೋಕ್ ಭವಿಷ್ಯ

ಮಂಡ್ಯ : ‘ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಡನ್ ಗೆ ತೆರಳಿದ ಬಳಿಕ ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳುತ್ತೆ ‘ ಎಂದು  ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್  ಮಂಡ್ಯದಲ್ಲಿ ಭವಿಷ್ಯ ನುಡಿದಿದ್ದಾರೆ.

‘ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬೀಳಿಸೋಕೆ ಭಾರತೀಯ ಜನತಾ ಪಕ್ಷ ಬೇಕಿಲ್ಲ. ಸಮಿಶ್ರ ಸರ್ಕಾರವನ್ನು ಉರುಳಿಸಲು ಅದರಲ್ಲಿರುವ ಅತೃಪ್ತ ಆತ್ಮಗಳೇ ಸಾಕು. ಅವರೇ ಶೀಘ್ರವೇ ಸರ್ಕಾರವನ್ನು ಕೆಡವುತ್ತಾರೆ. ಸಿದ್ದರಾಮಯ್ಯ ಮಾಡ್ತಾರೋ ಅಥವಾ ಡಿಕೆಶಿ ಮಾಡ್ತಾರೋ ಗೊತ್ತಿಲ್ಲ. ಆದಷ್ಟು ಬೇಗ ಅವರೇ ಸರ್ಕಾರವನ್ನು ಪತನ ಮಾಡಲಿ ‘ ಎಂದು ಆರ್. ಅಶೋಕ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com