ರಫೇಲ್ ಡೀಲ್ ನಲ್ಲಿ PM ಮೋದಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ : ದಿನೇಶ್ ಗುಂಡೂರಾವ್

‘ ಮುಂದಿನ ತಿಂಗಳು ರಫೇಲ್ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಲಿದ್ದೇವೆ. ಸ್ಥಳಿಯ ಮಟ್ಟದ ಚುನಾವಣೆ ಬಳಿಕ ರಫೇಲ್ ಡೀಲ್ ಬಗ್ಗೆ ದೇಶಾದ್ಯಂತ ಹೋರಾಟ ನಡೆಸಲಿದ್ದೇವೆ ‘ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

‘ರಫೇಲ್ ಡೀಲ್ನಲ್ಲಿ ಪ್ರಧಾನಿ ಮೋದಿ ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ. ಹೋರಾಟದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಲಾಗಿದೆ ‘ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಲಪಂಥೀಯವಾದವನ್ನು ವಿರೋಧಿಸುವವರಿಗೆ ಪ್ರಗತಿಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡುವ ಸಂಸ್ಥೆಗಳು ದೇಶದಲ್ಲಿ ಹುಟ್ಟುತ್ತಿವೆ. ಬಿಜೆಪಿಯಂಥ ಪ್ರಚೋದನೆ ಕಾಂಗ್ರೆಸ್ ಮಾಡಲ್ಲ. ಬಿಜೆಪಿಯದ್ದು ಧರ್ಮದ‌ ಹೆಸರಿನಲ್ಲಿ ಕೀಳುಮಟ್ಟದ ರಾಜಕಾರಣ. ಗೌರಿಹತ್ಯೆಯಲ್ಲಿ ಬಲಪಂಥೀಯರಿದ್ದಾರೆ. ಬಿಜೆಪಿ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ‘ ಎಂದಿದ್ದಾರೆ.

‘ ಬಿಜೆಪಿಯದ್ದು ಅನೈತಿಕ ರಾಜಕಾರಣ. ದೇಶವನ್ನು ಆರ್.ಎಸ್‌ಎಸ್ ಮತ್ತು ಬಿಜೆಪಿ ತಪ್ಪು ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದೆ. ಬಿಜೆಪಿ ವಿರೋಧಿಗಳನ್ನು ಪಾಕಿಸ್ತಾನಿಗಳೆಂದು ಆರ್.ಎಸ್.ಎಸ್ ಬಿಜೆಪಿ ಬಿಂಬಿಸುತ್ತಿದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com