ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ : ಹರಿದು ಬಂದ ಭಕ್ತಸಾಗರ…!

ರಾಯಚೂರು : ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ ಮಹೋತ್ಸವ ಕಣ್​ತುಂಬಿಸಿಕೊಳ್ಳಲು ಭಕ್ತಸಾಗರವೇ ಹರಿದಿತ್ತು.

ರಾಯರ 347ನೇ ಆರಾಧನೆ ವೀಕ್ಷಿಸಲು ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಆಗಮಿಸಿ ರಾಯರ ದರ್ಶನ ಪಡೆದು ಧನ್ಯರಾದರು. ಆರಾಧನೆ ನಿಮಿತ್ತ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ವಿವಿಧ ದೃವ್ಯಗಳಿಂದ ಮಹಾ ಪಂಚಾಮೃತಾಭಿಷೇಕ ನಡೆಸಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಅಭಿಷೇಕಗಳನ್ನು ನಡೆಸಿದರು. ಬೆಳಗಿನ ಜಾವದಿಂದಲೆ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದ್ದು, ಸಹಸ್ರಾರು ಭಕ್ತರ ಮಧ್ಯೆ ನವರತ್ನ ಖಚಿತ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.

ಮೂಲ ವೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ತಿರುಪತಿ ತಿರುಮಲದಿಂದ ತರಲಾದ ಶ್ರೀನಿವಾಸ ದೇವರ ಶೇಷವಸ್ತ್ರಗಳನ್ನು ಶ್ರೀಮಠದ ಪ್ರಾಂಗಣದಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ಆನಂತರ ಅವುಗಳನ್ನು ಶ್ರೀ ಸುಬುಧೇಂದ್ರ ತೀರ್ಥರು ತಲೆ ಮೇಲೆ ಹೊತ್ತು ಸಾಗಿ ಶ್ರೀ ರಾಯರ ವೃಂದಾವನಕ್ಕೆ ಸಮರ್ಪಿಸಿದರು. ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

 

 

Leave a Reply

Your email address will not be published.

Social Media Auto Publish Powered By : XYZScripts.com