ಮಂಡ್ಯ : ಗ್ರಾಮವಾಸ್ತವ್ಯ ಮಾಡಿದ ಜೆಡಿಎಸ್ ಶಾಸಕ : ಕುಮಾರಸ್ವಾಮಿ ಹಾದಿಯಲ್ಲಿ ಕೆ.ಅನ್ನದಾನಿ
ಮಂಡ್ಯ : ಸಿ.ಎಂ ಕುಮಾರಸ್ವಾಮಿ ಹಾದಿಯಲ್ಲೇ ಮಂಡ್ಯದ ಜೆಡಿಎಸ್ ಶಾಸಕ ನಡೆಯುತ್ತಿದ್ದಾರೆ. ಹೆಚ್ಡಿಕೆ ಗ್ರಾಮವಾಸ್ತವ್ಯ ಮಾಡಿದಂತೆ ಮಳವಳ್ಳಿ ಶಾಸಕನಿಂದ ಗ್ರಾಮವಾಸ್ತವ್ಯ ನಡೀತೀದೆ. ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನಾದಾನಿ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ.
ಮಳವಳ್ಳಿ ತಾಲೂಕಿನ ಹೂವಿನಕೊಪ್ಪಲು ಗ್ರಾಮದಲ್ಲಿ ಜೆಡಿಎಸ್ ಶಾಸಕ ಕೆ. ಅನ್ನದಾನಿಯವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಮಾದಿಗ ಸಮುದಾಯದ ಚಿಕ್ಕಣ್ಣ ಎಂಬುವರ ಮನೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ನಾಲ್ಕು ಬಾರಿ ಜಾತಿವಾರು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ.
ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಜಾತಿವಾರು ಗ್ರಾಮ ವಾಸ್ತವ್ಯಕ್ಕೆ ಯೋಜನೆ ರೂಪಿಸಿದ್ದಾರೆ. 15 ದಿನಕ್ಕೊಮ್ಮೆ ಕ್ಷೇತ್ರದ ವಿವಿಧೆಡೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆಯೂರಲು ಶಾಸಕ ಅನ್ನದಾನಿ ರಣತಂತ್ರ ರೂಪಿಸಿದ್ದಾರೆ.
‘ ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಶಾಸಕರ ಮಾಸ್ಟರ್ ಪ್ಲಾನ್. ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಜೆಡಿಎಸ್ ಶಾಸಕ…? ಯಾವ ಸಂದರ್ಭದಲ್ಲಿ ಬೇಕಾದ್ರೂ ಚುನಾವಣೆ ಎದುರಾಗಬಹುದೆಂಬ ಊಹೆ ಹಿನ್ನಲೆಯಲ್ಲಿ ವೋಟ್ ಬ್ಯಾಂಕ್ ಹಿಡಿದಿಡಲು ಯತ್ನಿಸುತ್ತಿದ್ದಾರೆ ‘ ಎಂದು ಕೆಲವರು ವಿಶ್ಲೇಷಣೆ ಮಾಡಿದ್ದಾರೆ