ಹೈದ್ರಾಬಾದ್ : ಮೋದಿ ಹತ್ಯೆ ಸಂಚಿನಲ್ಲಿ ಭಾಗಿ ಆರೋಪ – ತೆಲುಗು ಲೇಖಕ ವರವರ ರಾವ್ ಬಂಧನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ರೂಪಿಸಿದ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಾವೋವಾದಿ ಚಿಂತಕ, ತೆಲುಗು ಲೇಖಕ ವರವರ ರಾವ್ ಅವರನ್ನು ಮಹಾರಾಷ್ಟ್ರ ಪೋಲೀಸರು ಹೈದರಾಬಾದಿನಲ್ಲಿ ಮಂಗಳವಾರ ಬಂಧಿಸಿದ್ದಾರೆ.

ಸಂಬಂಧಿಕರು, ಪರಿವಾರ ಸದಸ್ಯರು ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದ ಪುಣೆಯ ಪೋಲೀಸರ ತಂಡ ಕ್ರಾಂತಿಕಾರಿ ಲೇಖಕ ವರವರ ರಾವ್ ಅವರನ್ನು ಬಂಧಿಸಿದೆ. ವೈದ್ಯಕೀಯ ಪರೀಕ್ಷೆಗಾಗಿ ವರವರ ರಾವ್ ಅವರನ್ನು ಹೈದರಾಬಾದಿನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಪುಣೆಗೆ ಸ್ಥಳಾಂತರಿಸುವ ಮೊದಲು ನ್ಯಾಯಾಲಯದದ ಮುಂದೆ ಹಾಜರು ಪಡಿಸುವ ಸಾಧ್ಯತೆಯಿದೆ.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಐವರನ್ನು ಬಂಧಿಸಲಾಗಿತ್ತು. ಈ ಐವರ ಪೈಕಿ ಒಬ್ಬರ ಮನೆಯಲ್ಲಿ ಮೋದಿ ಹತ್ಯೆಯ ಸಂಚಿನ ಕುರಿತು ಬರೆಯಲಾಗಿದ್ದ ಪತ್ರವೊಂದು ದೊರೆತು, ಪುಣೆ ಪೋಲೀಸರು ಅದನ್ನು ಜೂನ್ ನಲ್ಲಿ ವಶಪಡಿಸಿಕೊಂಡಿದ್ದರು.

ಮೋಧಿ ಹತ್ಯೆ ಸಂಚಿನಲ್ಲಿ ಭಾಗಿಯಾದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ವರವರ ರಾವ್ ‘ ಕೋರೇಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ 5 ಜನರೂ ಶೋಷಿತರ ಅಭಿವೃದ್ಧಿಗಾಗಿ ಹೋರಾಡುತ್ತಿದ್ದರು ‘ ಎಂದು ಹೇಳಿದ್ದಾರೆ.

One thought on “ಹೈದ್ರಾಬಾದ್ : ಮೋದಿ ಹತ್ಯೆ ಸಂಚಿನಲ್ಲಿ ಭಾಗಿ ಆರೋಪ – ತೆಲುಗು ಲೇಖಕ ವರವರ ರಾವ್ ಬಂಧನ

Leave a Reply

Your email address will not be published.