ಬಿಜೆಪಿ ಶಾಸಕರು ಕೈ ಪಕ್ಷಕ್ಕೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ : ಈಶ್ವರ್​ ಖಂಡ್ರೆ

ಬಾಗಲಕೋಟೆ : ನಮ್ಮವರು ಯಾರು ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ, ಅವ್ರು ಯಾರು ಅಂತಾ ನಿಮಗೇಕೆ ಹೇಳಲ್ಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳ ಪ್ರಚಾರಾರ್ಥವಾಗಿ ಬಾಗಲಕೋಟೆಗೆ ಆಗಮಿಸಿ ಮಾತನಾಡಿದ ಈಶ್ವರ್​ ಖಂಡ್ರೆ, ಆರ್ ಎಸ್ ಎಸ್ ಉಪನ್ಯಾಸ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿಗೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಹಿಂದಿನಿಂದಲೂ ಆರ್.ಎಸ್.ಎಸ್ ನಿಲುವು ಖಂಡಿಸುತ್ತ ಬಂದಿದ್ದಾರೆ, ಈ ಬಗ್ಗೆ ನಾನು ಹೆಚ್ಚು ಹೇಳಲ್ಲ, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ,  ೫ ವರ್ಷ ಸ್ಥಿರ ಆಡಳಿತ ನಡೆಸುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ, ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲಗಳು ನಿವಾರಣೆಯಾಗಲಿವೆ ಎಂದ್ರು.

eshwar khandre ಗೆ ಚಿತ್ರದ ಫಲಿತಾಂಶ

ಇನ್ನು ಸಿದ್ದರಾಮಯ್ಯ ಕುಮಾರಸ್ವಾಮಿ ಕುರ್ಚಿ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಖಂಡ್ರೆ,  ಸದಾನಂದಗೌಡ ಮೊದಲು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆದ್ದು ತಮ್ಮ ಕುರ್ಚಿ ಉಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು. ಇದೆ ವೇಳೆ ಸಾಲಮನ್ನಾ ರಾಜಕೀಯ ಪ್ರೇರಿತ ಎಂಬ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿಕೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಖಂಡ್ರೆ ಅದು ಅವ್ರ ವೈಯ್ಯಕ್ತಿಕ ವಿಚಾರ ಎಂದು ನುಣುಚಿಕೊಂಡ್ರು. ಇನ್ನು ಸಮನ್ವಯ ಸಮೀತಿಯಲ್ಲಿ ಯಾರು ಇರಬೇಕು, ಇರಬಾರದು ಎಂದು ಎರಡು ಪಕ್ಷಗಳ ಸಚಿವರು ಹಾಗೂ ಮುಖಂಡರು ನಿರ್ಧರಿಸುತ್ತಾರೆ ಎಂದ್ರು.

Leave a Reply

Your email address will not be published.

Social Media Auto Publish Powered By : XYZScripts.com