ವರದಕ್ಷಿಣೆಗಾಗಿ ಪೀಡಿಸಿ ಪತ್ನಿಯನ್ನು ಹೊರಹಾಕಿದ ಬಾಂಗ್ಲಾ ಕ್ರಿಕೆಟರ್.? : ಹೆಂಡತಿಯ ಆರೋಪ..!

ಬಾಂಗ್ಲಾ ಕ್ರಿಕೆಟರ್ ಮೊಸಾದೆಕ್ ಹೊಸೇನ್ ಸೈಕಾತ್ ಅವರ ಮೇಲೆ ವರದಕ್ಷಿಣಗಾಗಿ ಕಿರುಕುಳ ನೀಡಿ ಪತ್ನಿಯನ್ನು ಮನೆಯಿಂದ ಹೊರದೂಡಿದ ಆರೋಪ ಎದುರಾಗಿದೆ. ‘ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದು ಅಲ್ಲದೇ ನನ್ನುನ್ನು ಮನೆಯಿಂದ ಹೊರದಬ್ಬಲಾಗಿದೆ ‘ ಎಂದು ಕ್ರಿಕೆಟರ್ ಪತ್ನಿ ಶರ್ಮೀನ್ ಸಮೀರಾ ಉಷಾ ಆರೋಪಿಸಿದ್ದಾರೆ.

22 ವರ್ಷದ ಮೊಸಾದೆಕ್ ಹೊಸೇನ್ 6 ವರ್ಷಗಳ ಹಿಂದೆ ಶರ್ಮೀನ್ ಸಮೀರಾ ಅವರನ್ನು ವಿವಾಹವಾಗಿದ್ದರು. ‘ ಹಲವು ದಿನಗಳಿಂದ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಆಗಸ್ಟ್ 15 ರಂದು ಪತ್ನಿಯನ್ನು ಮನೆಯಿಂದ ಹೊರದಬ್ಬಿದ್ದಾರೆ. 10 ಲಕ್ಷ ಟಕಾ (ಟಕಾ – ಬಾಂಗ್ಲಾದೇಶದ ಸ್ಥಳೀಯ ಕರೆನ್ಸಿ) ಬೇಕೆಂದು ಮೊಸಾದೆಕ್ ಪೀಡಿಸಿದ್ದಾರೆ ‘ ಎಂದು ಶರ್ಮೀನ್ ಸಮೀರಾ ಉಷಾ ಪರ ವಕೀಲ ಆರೋಪಿಸಿದ್ದಾರೆ.

ಸೆಪ್ಟೆಂಬರ್ 13 ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟೂರ್ನಿಗಾಗಿ ಮೊಸಾದೆಕ್ ಹೊಸೇನ್ ಬಾಂಗ್ಲಾ ತಂಡದಲ್ಲಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com