ಡಿಎಂಕೆ ನೂತನ ಸಾರಥಿಯಾಗಿ ಸ್ಟಾಲಿನ್​ ಆಯ್ಕೆ : ಸಹೋದರ ಅಳಗಿರಿಯಿಂದ ಬೆದರಿಕೆ

ತಮಿಳುನಾಡು : ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ನಿಧನರಾದ ನಂತರ, ಡಿಎಂಕೆ ಪಕ್ಷಕ್ಕೆ ಮುಂದಿನ ಅಧಕ್ಷ ಯಾರು..? ಕರುಣಾನಿಧಿ ಮಕ್ಕಳಾದ ಸ್ಟಾಲಿನ್​ ಅಥವಾ ಅಳಗಿರಿಯಾ..? ಎಂಬ ಗೊಂದಲಕ್ಕೆ ಇದೀಗ ತೆರೆಬಿದ್ದಿದ್ದು. ಡಿಎಂಕೆ ಪಕ್ಷದ ನೂತನ ಸಾರಥಿಯಾಗಿ ಸ್ಟಾಲಿನ್​ ಆಯ್ಕೆಯಾದ್ದಾರೆ.

http://img.kn.eenaduindia.com/Article/201808281124578725_MK-Stalin-Elected-President-Of-DMK_SECVPF.gif

ತಮಿಳುನಾಡಿನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಸ್ಟಾಲಿನ್​ ಗೆ ಅಧ್ಯಕ್ಷ ಪದವಿ ನೀಡಲು ಎಲ್ಲಾ ಸಮ್ಮತಿ ನೀಡಿದ್ದಾರೆ. ಇನ್ನು  ಸ್ಟಾಲಿನ್​ ನಾಯಕತ್ವವನ್ನು ಪ್ರಶ್ನಿಸಿದ ಕರುಣಾನಿಧಿಯವರ ಮತ್ತೊಬ್ಬ ಮಗನಾದ ಅಳಗಿರಿ ಸ್ಪರ್ಧೆ ನಡೆಸಿದ್ದರು,  ಆದರೆ ಈಗ ಬಂದ ಫಲಿತಾಂಶದಿಂದ ತೀವ್ರ ಮುಖಭಂಗವಾಗಿದೆ. ಇನ್ನು ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಧ್ಯಕ್ಷರ ಆಯ್ಕೆಯ ನಂತರ ದೀರ್ಘ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಿವಂಗತ ಎಂ. ಕರುಣಾನಿಧಿಗೆ ಭಾರತರತ್ನ ನೀಡಬೇಕು ಎಂದು ಪಕ್ಷದವರು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com