ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ಹಾಡು : ಚಂದನ್​ ಶೆಟ್ಟಿಗೆ ಸಿಸಿಬಿ ನೋಟಿಸ್​…!

ಬೆಂಗಳೂರು : ಮಾದಕ ವಸ್ತುಗಳ ಸೇವನೆ ಪ್ರಚೋದನೆಗೆ ಹಾಡು ಹಾಡಿದ ಆರೋಪದಡಿ ಸಿಂಗರ್​ ಹಾಗೂ ಬಿಗ್​ಬಾಸ್ ಖ್ಯಾತಿಯ ಚಂದನ್​ ಶೆಟ್ಟಿಗೆ ಸಿಸಿಬಿ ನೋಟಿಸ್​ ನೀಡಿದ್ದು, ಇಂದು ಚಂದನ್​ ಸಿಸಿಬಿ ಕಚೇರಿಗೆ ಹಾಜರಾಗಲಿದ್ದಾರೆ. ಈ ಹಾಡಿನಲ್ಲಿ ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇಲೆ ನೊಟೀಸ್ ನೀಡಲಾಗಿದೆ. 2015 ರಲ್ಲಿ ಬಿಡುಗಡೆಯಾಗಿದ್ದ ‘ಅಂತ್ಯ’ ಶೀರ್ಷಿಕೆಯ ಗಾಂಜಾ… ಸಾಂಗ್​ನಲ್ಲಿ ಮಾದಕ ವಸ್ತುವನ್ನು ಸೇವಿಸಲು ಪ್ರಚೋದನೆ ನೀಡುವ ಸಾಹಿತ್ಯವನ್ನು ಚಂದನ್ ಶೆಟ್ಟಿ ರಚಿಸಿದ್ದರು.

CHANDAN SHETTY TWITTER ಗೆ ಚಿತ್ರದ ಫಲಿತಾಂಶ

ರ್ಯಾಪ್​ ಹಾಡುಗಳನ್ನು ಹಾಡುತ್ತಾ ಹಾಗೂ ಬಿಗ್​ಬಾಸ್​ ಸೀಸನ್​ 5ರ ವಿನ್ನರ್​ ಆಗಿ ಫೇಮಸ್​ ಆದ ಚಂದನ್​ ಶೆಟ್ಟಿಗೆ ಸಂಕಷ್ಟವೊಂದು ಎದುರಾಗಿದೆ. ಚಂದನ್​ ಶೆಟ್ಟಿ ಹಾಡಿದ ಮಾದಕ ವಸ್ತಗಳ ಸೇವನೆ ಪ್ರಚೋದನೆ ಮಾಡುವ ಹಾಡು ತುಂಬಾ ಫೇಮಸ್​ ಆಗಿದೆ. ಆದರೆ ಇದ್ದು ಈ ಹಾಡು ಯುವಕರ ಮಾದಕ ವಸ್ತುಗಳ ಸೇವನೆಗೆ ಮತಷ್ಟು ಪ್ರಚೋದನೆ ನೀಡಿದೆ  ಎನ್ನವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ‌ ಸಿಸಿಬಿಯ ಮಹಿಳಾ ಮತ್ತು ಮಾದಕ ದ್ರವ್ಯ ದಳ ಎಸಿಪಿ ವೇಣುಗೋಪಾಲ್ ಅವರು ನೊಟೀಸ್ ನೀಡಿದ್ರು. ಆದರೆ, ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಇವತ್ತು ವಿಚಾರಣೆಗೆ ಹಾಜರಾಗಲಿದ್ದೇನೆ ಎಂದು ವಿಡಿಯೋ ಮೂಲಕ ಚಂದನ್ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published.