ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದರೆ ನನಗೆ ಸಂತೋಷ : ರಮೇಶ್​​ ಜಾರಕಿಹೊಳಿ

ಮೈಸೂರು : ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದರೆ ನನಗೆ ಸಂತೋಷ, ನಾನು ಅವರ ಜೊತೆ ಯಾವಾಗಲು ಇರುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಆಗಲು ಮೈಸೂರಿಗೆ ಆಗಮಿಸಿದಾಗ ಮಾತನಾಡಿದ ರಮೇಶ್​ ಜಾರಕಿಹೊಳಿ,  ನಮ್ಮ‌ ಕ್ಷೇತ್ರದ ಕೆಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಂದಿದ್ದೆ. ಸಿದ್ದರಾಮಯ್ಯ ನಮ್ಮ‌ ನಾಯಕರು ಅವರನ್ನು ಭೇಟಿಯಾಗಲು ನಾನು ಬಂದಿದ್ದೇನೆ. ಅವರನ್ನು ಭೇಟಿಯಾಗಿ 15 ದಿನಗಳಾಗಿತ್ತು, ವಾರಕೊಮ್ಮೆ ಸಿದ್ದರಾಮಯ್ಯರನ್ನ ಭೇಟಿಯಾಗುತ್ತೇನೆ. ಆ ಕಾರಣದಿಂದ ಮತ್ತೆ ಭೇಟಿಯಾಗಲು ಬಂದಿದ್ದೆ ಅಷ್ಟೆ. ಅವರು ಮತ್ತೊಮ್ಮೆ ಸಿಎಂ ಆದರೆ ಸಂತೋಷ, ಅವರ ಜೊತೆಯಲ್ಲಿ ನಾನು ಯಾವಾಗಲು ಇರುತ್ತೇವೆ.
ಅವರು ಜೆ.ಡಿ.ಎಸ್ ನಲ್ಲಿ ಇದ್ದಾಗಲು ಜಾರಕಿಹೊಳೆ ಕುಟುಂಬ ಸಿದ್ದರಾಮಯ್ಯರ ಜೊತೆ ಇದೆ, ಕಳೆದ 30 ವರ್ಷದಿಂದ ನಮ್ಮ‌ ಕುಟುಂಬ ಅವರ ಜೊತೆ ಇದೆ ಎಂದಿದ್ದು, ಇವರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ.

ರಮೇಶ್​ ಜಾರಕಿಹೊಳಿ ಸಿದ್ದರಾಮಯ್ಯ ಗೆ ಚಿತ್ರದ ಫಲಿತಾಂಶ

ಸಿದ್ದರಾಮಯ್ಯನವರು ಹೇಳಿದಂತೆ ನಾನು ಕೇಳುತ್ತೇವೆ, ನಾನೂ ಯಾವಾಗಲು ಎಸ್ಕಾರ್ಟ್ ಬಳಸುವುದಿಲ್ಲ, ಈಗಲೂ ಎಸ್ಕಾರ್ಟ್ ಇಲ್ಲದೆ ಬಂದಿದ್ದೇನೆ.ಎಂದ್ರು. ಇನ್ನ ಎರಡು ಗಂಟೆಗಳ ಕಾಲ ಚರ್ಚೆಸಿದ್ದು, ರಮೇಶ್​ ಜಾರಕಿಹೊಳಿ ಗುಟ್ಟು ಬಿಟ್ಟುಕೊಡಲಿಲ್ಲ, ಪೊಲೀಸ್​ ಎಸ್ಕಾರ್ಟ್​ ಇಲ್ಲದೆ ಆಗಮಿಸಿ ಸಚಿವರು ಭೇಟಿಯಾಗಿರುವುದು ಬಹಳಷ್ಟು ಮಹತ್ವ ಪಡೆದುಕೊಂಡಿದೆ.

 

Leave a Reply

Your email address will not be published.

Social Media Auto Publish Powered By : XYZScripts.com