Asian Games : ಜಾವೆಲಿನ್ ಎಸೆತ : ನೀರಜ್ ಚೋಪ್ರಾಗೆ ಬಂಗಾರದ ಪದಕ

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಒಲಿದಿದೆ. ಸೋಮವಾರ ನಡೆದ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಬಂಗಾರದ ಪದಕವನ್ನು ಜಯಿಸಿದ್ದಾರೆ.

ಮೊದಲ ಪ್ರಯತ್ನದಲ್ಲಿ ನೀರಜ್ ಚೋಪ್ರಾ 83.46 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಮೂರನೇ ಪ್ರಯತ್ನದಲ್ಲಿ ನೀರಜ್ ಕುಮಾರ್ ಎಸೆದ ಜಾವೆಲಿನ್ 88.06 ಮೀಟರ್ ದೂರವನ್ನು ಕ್ರಮಿಸಿತು.. 3ನೇ ಬಾರಿ 83.25 ಮೀಟರ್ ಹಾಗೂ 4ನೇ ಸಲ 86.36 ಮೀಟರ್ ದೂರಕ್ಕೆ ಎಸೆದರು. 2ನೇ ಹಾಗೂ 6ನೇ ಪ್ರಯತ್ನದಲ್ಲಿ ನೀರಜ್ ತಪ್ಪನ್ನು (ಫೌಲ್) ಎಸಗಿದರು.

ಏಸ್ಯನ್ ಕ್ರೀಆಡಕೂಟದ ಇತಿಹಾಸದಲ್ಲಿ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ದೊರೆತಿರುವ 2ನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮೊದಲು 1982 ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಗುರತೇಜ್ ಸಿಂಗ್ ಸ್ವರ್ಣವನ್ನು ಗೆದ್ದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com