ಮೈಸೂರು : ಮತ್ತೆ ಸಿಎಂ ಆಗುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ..?

ಮೈಸೂರು : ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸುತ್ತಿದ್ದ  ವಿಚಾರ ಈಗ ರಾಜಕೀಯದಲ್ಲಿ ಸಖತ್​ ಸದ್ದು ಮಾಡುತ್ತಿದ್ದು, ಮೈತ್ರಿ ಸರ್ಕಾರ ಬೀಳುತ್ತದೆ ಅನ್ನೂ ಮಾತುಗಳು ಕೇಳಿಬರುತ್ತಿದ್ದು ಇದಕ್ಕೆಲ್ಲ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಹೊಳೆ ನರಸೀಪುರಕ್ಕೆ ಹೋಗಿದ್ದಾಗ ಜನರು ಮತ್ತೆ ಸಿಎಂ ಆಗ್ಬೇಕು ಅಂದ್ರು, ಅದಕ್ಕೆ ನಾನು ಆಯ್ತು ಬಿಡ್ರಪ್ಪ ಅಂತ ಅವರ ಮಾತಿಗೆ ಸಿಎಂ ಆಗ್ತಿನಿ ಅಂತ ಹೇಳ್ದೆ,  ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿರಾ ಹೇಗೆ?  ಅಂತ ಕೇಳಿದ್ರು ಅದಕ್ಕೆ ನಾನು ಅದು ಮುಂದಿನ ದಿನಗಳಲ್ಲಿರುವ ವಿಚಾರ ನೋಡಣ, ನಾನು ಚುನಾವಣೆಗೆ ಸ್ಪರ್ಧೆ ಮಾಡೋಲ್ಲ ಅಂತ ಹೇಳಿದ್ದೆ, ಆದ್ರೆ ಸಕ್ರಿಯ ರಾಜಕೀಯದಿಂದ ದೂರ ಇರ್ತಿನಿ ಅಂತ ಹೇಳಿಲ್ಲ, ಚುನಾವಣೆಗೆ ಸ್ಪರ್ಧೆ ಮಾಡುವುದು ಬಿಡೋದು ನೋಡೋಣ, ಪರೋಕ್ಷವಾಗಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ರು.

 

Leave a Reply

Your email address will not be published.

Social Media Auto Publish Powered By : XYZScripts.com