ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ ‘ಕವಲುದಾರಿ’ ಟೀಸರ್​…!

ಬೆಂಗಳೂರು : ಸೆಪ್ಟೆಂಬರ್ 2 ರಂದು ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ‘ಕವಲು ದಾರಿ’ ಸಿನಿಮಾದ ಟೀಸರ್​ ಲಾಂಚ್​ ಆಗಲಿದೆ. ಕಾರ್ಯಕ್ರಮದಲ್ಲಿ ನಟ ಪುನೀತ್ ಟೀಸರ್ ಅನಾವರಣಗೊಳಿಸಲಿದ್ದಾರೆ.

ಕಿರುತೆರೆಯಲ್ಲಿ ಮಿಂಚುತ್ತಿದ್ದ ರಿಷಿ ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ನಾಯಕನಾಗಿ ಬೆಳ್ಳಿ ತೆರೆ ಮೇಲೆ ಮಿಂಚಿದ್ರು.  ಇದೀಗ ಹೇಮಂತ್ ನಿರ್ದೇಶನದ ಕವಲುದಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇದೀಗ ಈ ಚಿತ್ರದ ಟೀಸರ್ ಬಿಡುಗಡೆಗೂ ದಿನಾಂಕ ನಿಗದಿಯಾಗಿದೆ. ವಿಶೇಷವಾದೊಂದು ಸ್ಥಳವಾದ ಅಕ್ಕಸಮ್ಮೇಳನದಲ್ಲಿ  ಟೀಸರ್ ಅನಾವರಣಗೊಳ್ಳಲಿದೆ.

ಈ ಚಿತ್ರ ಪುನೀತ್ ರಾಜ್‍ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಿಂದ ಹೊರ ಬರಲಿರೋ ಮೊದಲ ಚಿತ್ರವಾಗಿದ್ದು, ಈ ಸಿನಿಮಾದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅನಂತ್ ನಾಗ್ ಅವರು ಮುಖ್ಯ ಪಾತ್ರವೊಂದರಲ್ಲಿ ನಟಿಸಿರೋ ಈ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ಟೀಸರ್ ಲಾಂಚ್ ಆದ ನಂತರದಲ್ಲಿ ಬಿಡುಗಡೆಯ ದಿನಾಂಕವೂ ಹೊರ ಬೀಳಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com