ಉಭಯ ಪಕ್ಷಗಳ ಮದುವೆಯಾಗಿದೆ, ಇದನ್ನು ಯಾರೂ ಮುರಿಯಲು ಸಾಧ್ಯವಿಲ್ಲ : ಜಮೀರ್​ ಅಹ್ಮದ್​​

ಹಾಸನ : ರಾಜ್ಯದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಪಕ್ಕಾ ಮದುವೆಯಾಗಿದ್ದು, ಇದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಖಾತೆ ಸಚಿವ ಜಮೀರ್ ಅಹ್ಮದ್​ ಹೇಳಿದ್ದಾರೆ.

ಹಾಸನ ನಗರದ ವಿವಿಧೆಡೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಜಮೀರ್​, ದೋಸ್ತಿ ಸರಕಾರ ಶೀಘ್ರ ಪತನವಾಗಲಿದೆ ಎನ್ನುತ್ತಿರುವವರಿಗೆ ತಿರುಗೇಟು ನೀಡಿದ್ದ ಜಮೀರ್​, ಉಭಯ ಪಕ್ಷಗಳ ನಡುವೆ ರಿಜಿಸ್ಟರ್ ಮದುವೆಯಾಗಿದ್ದು, ಪಕ್ಕಾ ಮದುವೆ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು.

ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸ್ಪಷ್ಟನೆ ನೀಡಿದ ಜಮೀರ್, ಮುಂದಿನ‌ ಚುನಾವಣೆ ನಂತರ ‌ಸಿಎಂ ಆಗ್ತಿನೀ ಅಂತ ಸಿದ್ದರಾಮಯ್ಯ ಹೇಳಿದ್ರು. ಕುಮಾರಸ್ವಾಮಿ‌ ಅವರನ್ನು ಇಳಿಸಿ ನಾನು ಸಿಎಂ ಆಗ್ಬೇಕು ಎಂದು ಹೇಳಿದ್ದಾರಾ? ಎಂದು ಮರು ಪ್ರಶ್ನೆ ಹಾಕಿದರು. ಕೊಡಗಿನಲ್ಲಿ ಸಾವಿರಕ್ಕಿಂತಲೂ ಹೆಚ್ಚು‌ ಮನೆ ಹಾನಿಗೊಳಗಾಗಿವೆ,  ಸದ್ಯ ಗಂಜಿ ಕೇಂದ್ರ ದಲ್ಲಿ ಆಶ್ರಯ ಪಡೆದಿರುವವರಿಗೆ ತಾತ್ಕಾಲಿಕವಾಗಿ ಬಾಡಿಗೆ ಮನೆ‌ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

Leave a Reply

Your email address will not be published.