ಮೋದಿ ಸರ್ಕಾರ ಹೊಟ್ಟೆಯಲ್ಲಿ ಭ್ರಷ್ಟಾಚಾರ ತುಂಬಿಕೊಂಡು ನಿದ್ದೆಗೆ ಜಾರಿದೆ : ಜೈವೀರ್ ಶೇರ್ಗಿಲ್

ಮಂಗಳೂರಿನಲ್ಲಿ ಎಐಸಿಸಿ ವಕ್ತಾರ ಜೈವೀರ್ ಶೇರ್ಗಿಲ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಹೊಟ್ಟೆಯಲ್ಲಿ ಭ್ರಷ್ಟಾಚಾರ ತುಂಬಿಕೊಂಡು ನಿದ್ದೆಗೆ ಜಾರಿದೆ. ಮೋದಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸುವ ಭರವಸೆ ಕೊಟ್ಟಿದ್ದರು. ಆದ್ರೆ ಈಗ ಬಿಜೆಪಿ ದೇಶದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ ‘ ಎಂದಿದ್ದಾರೆ.

‘ ರಾಫೆಲ್ ಯುದ್ದ ವಿಮಾನ ಖರೀದಿಯಲ್ಲಿ ಮೋದಿ ಸರ್ಕಾರ ಭಾರೀ ಭ್ರಷ್ಟಾಚಾರ ನಡೆಸಿದೆ. ಈ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದ್ರೆ ನಾವು ದೇಶದ್ರೋಹಿಗಳಾಗ್ತೀವಿ. ರಫೇಲ್ ಹಗರಣದ ಮೂಲಕ ದೇಶಕ್ಕೆ 41,205 ಸಾರ್ವಜನಿಕ ಹಣ ನಷ್ಟವಾಗಿದೆ. 526 ಕೋಟಿಯ ವಿಮಾನವನ್ನ 1670 ಕೋಟಿಗೆ ಖರೀದಿಸಲಾಗಿದೆ. ರಕ್ಷಣಾ ಸಚಿವೆ ನಿರ್ಮಾಲ ಸೀತಾರಾಂ ರಫೆಲ್ ಹಗರಣದ ವಿಚಾರದಲ್ಲಿ ಮೌನವಾಗಿದ್ದಾರೆ. ಈ ವಿಚಾರದಲ್ಲಿ ಸಂಗೀತ ಕುರ್ಚಿಯಾಡುತ್ತಿದ್ದಾರೆ ‘ ಎಂದಿದ್ದಾರೆ.

‘ ಯುದ್ದ ವಿಮಾನ ತಯಾರಿ ವಿಚಾರದಲ್ಲಿ ಮೋದಿ ಕರ್ನಾಟಕಕ್ಕೂ ವಂಚಿಸಿದ್ದಾರೆ. ರಾಜ್ಯದ ಎಚ್ ಎಎಲ್ ಕಂಪೆನಿಯ ತಯಾರಿ ಗುತ್ತಿಗೆಯನ್ನ ಕಿತ್ತುಕೊಂಡಿದ್ದಾರೆ. 30 ಸಾವಿರ ಕೋಟಿ ಗುತ್ತಿಗೆ ಕಿತ್ತುಕೊಂಡು ಖಾಸಗಿ ಕಂಪೆನಿ ರಿಲಾಯನ್ಸ್ ಗೆ ನೀಡಲಾಯಿತು. ವಿಮಾನ ತಯಾರಿ ಅನುಭವವೇ ಇಲ್ಲದ ರಿಲಾಯನ್ಸ್ ಗೆ ಕೊಟ್ಟು ಎಚ್ ಎಎಲ್ ಅನ್ನು ಕಡೆಗಣಿಸಲಾಗಿದೆ. ಈ ಮೂಲಕ ಸಾರ್ವಜನಿಕ ವಲಯದ ಎಚ್ ಎಎಲ್ ಕಂಪೆನಿಯನ್ನು ಕಡೆಗಣಿಸಲಾಗಿದೆ ‘ ಎಂದು ಹೇಳಿದ್ದಾರೆ.

‘ ಈ ಮೂಲಕ ಮೋದಿ ಬಂಡವಾಳಶಾಹಿ ರಿಲಯನ್ಸ್ ಸ್ನೇಹಿತರಿಗೆ ಉತ್ತೇಜನ ನೀಡಿದ್ದಾರೆ. ಆದ್ರೆ ರಕ್ಷಣಾ ಮಂತ್ರಿ ಮಾತ್ರ ಗುತ್ತಿಗೆಯನ್ನೇ ಕೊಟ್ಟಿಲ್ಲ ಅಂತ ಸುಳ್ಳು ಹೇಳಿದ್ದಾರೆ. ಒಂದು ದೇಶ, ಒಂದು ಚುನಾವಣೆ ಎನ್ನುವುದು ಇನ್ನೊಂದು ಪಾಲಿಟಿಕಲ್ ಲಾಲಿ ಪಾಪ್. ಬಿಜೆಪಿ ದೇಶದ ಎಲ್ಲಾ ಕಡೆ ತನ್ನ ಸರ್ಕಾರವನ್ನು ವಿಸರ್ಜಿಸಲಿ. ಆಗ ಕಾಂಗ್ರೆಸ್ ಒಂದು ದೇಶ, ಒಂದು ಚುನಾವಣೆಯಡಿ ಚುನಾವಣೆ ಎದುರಿಸಲು ಸಿದ್ದ ‘ ಎಂದಿದ್ದಾರೆ.

Leave a Reply

Your email address will not be published.