ಸಮ್ಮಿಶ್ರ ಸರ್ಕಾರವಿದ್ರೂ HDK ಸಾಲಮನ್ನಾ ಘೋಷಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ : ಜಿಟಿಡಿ

ಮೈಸೂರು ಮಹಾ‌ನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ‘ ಸಮ್ಮಿಶ್ರ ಸರ್ಕಾರವಿದ್ದರೂ ಸಿಎಂ‌ ಕುಮಾರಸ್ವಾಮಿ ರೈತರ ಸಾಲ ಮನ್ನಾ ಘೋಷಣೆ ಮಾಡುವ ಮೂಲಕ ಕೊಟ್ಟ ಮಾತಿನಂತೆ ಎಚ್.ಡಿ.ಕೆ ನಡೆದುಕೊಂಡಿದ್ದಾರೆ ‘ ಎಮದು ಹೇಳಿದ್ದಾರೆ.

‘ ಬ್ಯಾಂಕ್ ಗಳ ಸಾಲಕ್ಕೆ ಬಡ್ಡಿ ಸಮೇತ ಪಾವತಿಸಲು ಸಮ್ಮಿತಿಸಿರುವುದು ದೇಶದಲ್ಲೆ ಮೊದಲು. ಲ್ಯಾನ್ಸ್ ಡೌನ್, ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಅಗತ್ಯವಿದೆ. ನಗರಪಾಲಿಕೆ ಚುನಾವಣೆ ಮುಗಿಯುತ್ತಿದ್ದಂತೆ ಬಹಳಷ್ಟು ಕಾಮಗಾರಿಗಳು ಚುರುಕುಗೊಳ್ಳಲಿದೆ ‘ ಎಂದಿದ್ದಾರೆ.

‘ ಕೊಡಗು ಪ್ರವಾಹಕ್ಕೆ ಸ್ಪಂದನೆ ಜೊತೆಗೆ ದಸರಾ ಹಾಗೂ ಚುನಾವಣೆ ಬಂದಿದೆ. ಹಲವು ಸವಾಲುಗಳು ಸರ್ಕಾರಕ್ಕೆ ಎದುರಾಗಿದೆ. ಸಮಸ್ಯೆಗಳೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಸಿಎಂ ಕೆಲಸ ಮಾಡ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಲಿವೆ. ನಾವು ಖುದ್ದು ಪ್ರಚಾರ ಮಾಡಲು ಕಾಲಾವಕಾಶವೇ ಇಲ್ಲದಂತಾಗಿದೆ.

‘ ಮೈಸೂರಿನ ಸಮಸ್ಯೆಗಳ ಬಗ್ಗೆ ನಮಗೆ ಅರವಿದೆ. ಖಂಡಿತವಾಗಿ ನಗರಪಾಲಿಕೆ ಆಡಳಿತ ಜೆಡಿಎಸ್ ಕೈಗೆ ಸಿಕ್ಕರೆ ನಗರದ ಅಭಿವೃದ್ದಿಗೆ ಸಮಗ್ರ ಅಭಿವೃದ್ಧಿ ಮಾಡ್ತೇವೆ ‘ ಎಂದು ಜಿ.ಟಿ. ದೇವೇಗೌಡ ಭರವಸೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com