ಸಿಎಂ ಕುಮಾರಸ್ವಾಮಿಗೆ ಬಿಗ್​ ರಿಲೀಫ್​ ನೀಡಿದ ಅರ್ಕಾವತಿ ಡಿನೋಟಿಫಿಕೇಶನ್​ ಪ್ರಕರಣ..!

ಬೆಂಗಳೂರು :  ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ತನಿಖೆಯಿಂದ ಹೆಸರು ಕೈಬಿಡುವಂತೆ ಸಂಸದರು, ಸಿಎಂ ಅರ್ಜಿ ಹಾಕಿದ್ದರು. ಇದೀಗ ಸಂಸದರು, ಶಾಸಕರನ್ನು ಕೈಬಿಡುವುದಾಗಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಿಎಂ ಕುಮಾರಸ್ವಾಮಿ, ಭೂಮಾಲೀಕರಾದ ಶ್ರೀರಾಮ್, ರವಿ ಪ್ರಕಾಶ್ ಹಾಗೂ ರಾಮಲಿಂಗಂ ಅವರನ್ನು ನ್ಯಾಯಾಧೀಶ ಬಿ.ವಿ.ಪಾಟೀಲ್ ತನಿಖೆಯಿಂದ ಖುಲಾಸೆಯಾಗಿದೆ. ಮಾಜಿ ಸಚಿವ ಚೆನ್ನಿಗಪ್ಪ ತನಿಖೆಯಿಂದ ಕೈಬಿಡುವಂತೆ ಅರ್ಜಿ ಸಲ್ಲಿಸಿರಲಿಲ್ಲ, ಹೀಗಾಗಿ ಚೆನ್ನಿಗಪ್ಪ ವಿರುದ್ಧ ಮಾತ್ರ ಇದೀಗ ಪ್ರಕರಣ ಉಳಿದುಕೊಂಡಿದೆ ಎನ್ನಲಾಗಿದೆ.

arkavathi-denotification-case-big-relief-cm-hd-kumaraswamy

ಡಿನೋಟಿಫಿಕೇಷನ್ ಆದ 4 ವರ್ಷದ ಬಳಿಕ ದೂರು ದಾಖಲಾಗಿದೆ. ಉದ್ದೇಶ ಪೂರ್ವಕವಾಗಿ ಅಥವಾ ಲಾಭದಾಯಕವಾಗಿ ಡಿನೋಟಿಫಿಕೇಷನ್ ಮಾಡಿರೋದಕ್ಕೆ ಪೂರಕ ಸಾಕ್ಷ್ಯಾಧಾರಗಳು ಇಲ್ಲ. ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ದೂರು ದಾಖಲು ಮಾಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

One thought on “ಸಿಎಂ ಕುಮಾರಸ್ವಾಮಿಗೆ ಬಿಗ್​ ರಿಲೀಫ್​ ನೀಡಿದ ಅರ್ಕಾವತಿ ಡಿನೋಟಿಫಿಕೇಶನ್​ ಪ್ರಕರಣ..!

Leave a Reply

Your email address will not be published.

Social Media Auto Publish Powered By : XYZScripts.com