ಲೋಕಸಭೆ ಚುನಾವಣೆಗೆ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ : ಈಶ್ವರ ಖಂಡ್ರೆ

ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ. ‘ ಪ್ರಧಾನಿ ನರೇಂದ್ರ ಮೋದಿ ಕೊಡಗಿಗೆ ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಸಾಂತ್ವನ ಹೇಳಬೇಕಿತ್ತು. ಆದ್ರೆ ಪ್ರಧಾನಿ ಕೆರಳಕ್ಕೆ ಮಾತ್ರ ಭೇಟಿ ನೀಡಿದ್ದು ಹೋಗಿದ್ದು ಸರಿಯಲ್ಲಾ. ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ ‘ ಎಂದಿದ್ದಾರೆ.

‘ ಕೇರಳಕ್ಕೆ ನೀಡಿದಷ್ಟೇ ಪರಿಹಾರ ಹಣವನ್ನು ಕೊಡುಗು ಸಂತ್ರಸ್ತರಿಗೆ ನೀಡಬೇಕಿತ್ತು. ನೆರೆಹಾವಳಿಯಿಂದ ಕೊಡಗಿನಲ್ಲಿ ಸಾವಿರಾರು ಕೋಟಿ ಹಾನಿಯಾಗಿದೆ. ಆದ್ರೆ ಕೇಂದ್ರ ಸರ್ಕಾರ ಕೇವಲ ಏಳೆಂಟು ಕೋಟಿ ಪರಿಹಾರ ಘೋಸಿದೆ. ಇದು ಸರಿಯಲ್ಲಾ ಇನ್ನೂ ಹೆಚ್ಚಿನ ಪರಿಹಾರ ಕೊಡಬೇಕು ’ ಎಂದು ಒತ್ತಾಯಪಡಿಸಿದ್ದಾರೆ.

‘ ಮೈತ್ರಿ ಸರ್ಕಾರ ಐದು ವರ್ಷ ಪೂರೈಸುವುದರಲ್ಲಿ ಸಂದೇಹವಿಲ್ಲಾ. ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ‘ ಎಂದು ಹೇಳಿದ್ದಾರೆ.

‘ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಅವರ ನೇತೃತ್ವದಲ್ಲಿ ಮತ್ತೆ ಕಾಂಗ್ರೆಸ್ ರಾಜ್ಯದ ಗದ್ದುಗೆ ಹಿಡಿಯುತ್ತೆ‌. ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com