ಸಿದ್ದರಾಮಯ್ಯನವರನ್ನು ಯಾರೂ ತುಳಿಯುತ್ತಿಲ್ಲ, ಅವರನ್ನು ಅವರೇ ತುಳಿದುಕೊಂಡರು : ಎಚ್.ವಿಶ್ವನಾಥ್

ಮೈಸೂರು: ಮೈಸೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ’ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ಸಂತೋಷ. ಅವರು ಯಾರ್ ಜೊತೆ ಹೋಗಿ ಸಿಎಂ ಆಗ್ತಾರೋ ಗೊತ್ತಿಲ್ಲ. ಅವರು ಆಸೆ ಪಡೋದ್ರಲ್ಲಿ ತಪ್ಪಿಲ್ಲ ‘ ಮಾಜಿ ಸಿಎಂ ಹೇಳಿಕೆಗೆ ವಿಶ್ವನಾಥ್ ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಯಾರು ತುಳಿಯಲಿಲ್ಲ, ಅವರನ್ನು ಅವರೇ ತುಳಿದುಕೊಂಡರು’ ಎಂದಿದ್ದಾರೆ.

‘ ಸಮನ್ವಯ ಸಮಿತಿ ಸಭೆ ತಡವಾಗುತ್ತಿರುವ ವಿಚಾರ. ಸಮನ್ವಯ ಸಮಿತಿ ಕರೆಯುವುದು ಸಿದ್ದರಾಮಯ್ಯ ಅವರ ಜವಬ್ದಾರಿ. ಆದಷ್ಟು ಬೇಗ ಸಮನ್ವಯ ಸಮಿತಿ ಕರೆಯಬೇಕು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಆ ಸಭೆಗೆ ಹೋಗಲೇಬೇಕು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಸಭೆಯಲ್ಲಿ ಇರುತ್ತಾರೆ ‘ ಎಂದು ಹೇಳಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾಸೀತಾರಮನ್ ಗರಂ ಆದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ’ ಈ ಘಟನೆ ಆಗಬಾರದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಎಲ್ಲರು ಒಂದೇ. ಸಾ.ರಾ.ಮಹೇಶ್ ಕರ್ನಾಟಕ ಸರ್ಕಾರದ ಪ್ರತಿನಿಧಿ ಹಾಗೂ ಕೊಡಗು‌ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ನಿರ್ಮಲಾ ಸಿತಾರಾಮನ್ ಅಷ್ಟು ಕೇರ್ ಲೆಸ್ ಆಗಿ ಮಾತನಾಡಬಾರದಿತ್ತು ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com