ಪೌರಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ : ದಿನೇಶ್ ಗುಂಡೂರಾವ್

ಬೆಳಗಾವಿ : ಬೆಳಗಾವಿಯಲ್ಲಿ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ‘ ಪೌರ ಸಂಸ್ಥೆಗಳ ಚುನಾವಣೆ ರಾಜ್ಯದಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲಾ ಕಡೆ ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅತೀ ಹೆಚ್ಚು ಸ್ಥಾನದಲ್ಲಿರುತ್ತೆ. ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲಾ ಅಂತಾ ನಮ್ಮನ್ನಾ ಜನರು ತಿರಸ್ಕಾರ ಮಾಡಿಲ್ಲಾ. ನಾವು ಕೊಟ್ಟಿದ್ದ ಮಾತುಗಳನ್ನ ಉಳಿಸಿಕೊಳ್ಳುವ ಕೆಲಸ ಸಿದ್ದರಾಮ ನೇತೃತ್ವದ ಸರ್ಕಾರ ಮಾಡಿತ್ತು ‘ ಎಂದಿದ್ದಾರೆ.

‘ ಬೇರೆ ಬೇರೆ ವಿಚಾರಕ್ಕೆ ನಾವು ಸೊತ್ತಿದ್ದೇವೆ, ಹೀಗಾಗಿ ಜನರ ಬಳಿ ಹೊಗಲು ನಮಗೆ ಯಾವುದೇ ತೊಂದರೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ ದುರ್ಬಲ ಎನೂ ಆಗಿಲ್ಲ. ಜೆಡಿಎಸ್ ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿಗಳಾಗಿ ಕೆಲಸ ಮಾಡಿದ್ದವು. ವಿರೋಧ ಮಾಡಿದ ಪಕ್ಷಗಳು ಒಂದಾದ ಮೇಲೆ ಸ್ವಲ್ಪ ಹೊಂದಾಣಿಕೆ ಕಷ್ಟವಾಗುತ್ತೆ ಆದ್ರೆ ಮುಂದೆ ಸರಿಯಾಗುತ್ತೆ ‘ ಎಂದು ಹೇಳಿದ್ದಾರೆ.

‘ ಒಂದೇ ಪಕ್ಷದಲ್ಲಿ ಹೊಂದಾಣಿಕೆ ಕಷ್ಟ ಇರುತ್ತೆ ಸದ್ಯ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ ಹೀಗಾಗಿ ಸಣ್ಣ ಪುಟ್ಟ ಗೊಂದಲಗಳಿರುತ್ತೆ. ಬೆಳಗಾವಿಯಿಂದ ಕಚೇರಿಗಳ ಸ್ಥಳಾಂತರ ಮಾಡುತ್ತಿರುವ ಬಗ್ಗೆ ಸರ್ಕಾರದ ಜೊತೆಗೆ ನಾನು ಮಾತಾಡಿ ತಡೆಯುವ ಪ್ರಯತ್ನ ಮಾಡುತ್ತೇನೆ ‘ ಎಂದಿದ್ದಾರೆ.

‘ ಬಿಜೆಪಿಯವರು ಪದೇ ಪದೇ ಹೇಳುತ್ತಾರೆ. ಸಿಎಂ ಆಗೊಕೆ ಅವಕಾಶ ಇಲ್ಲದಿದ್ರೂ ಯಡಿಯೂರಪ್ಪ ಸಿಎಂ ಆದರು. ಈಗಲೂ ನಮ್ಮ ಶಾಸಕರಿಗೆ ಪೋನ್ ಮಾಡಿ ಹಣ ಕೊಡುವುದು ಆಮೀಷೊಡ್ಡುವುದು ಮಾಡುತ್ತಿದ್ದಾರೆ. ಅವರಿಗೆ ಅಧಿಕಾರ ಇಲ್ಲದೆ ಇರೊಕೆ ಆಗುತ್ತಿಲ್ಲ ಅಧಿಕಾರಕ್ಕಾಗಿ ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಮಹದಾಯಿ ಬಗ್ಗೆ ಹೋರಾಟ, ಬರಗಾಲ ಇದ್ದಾಗ ಹೋರಾಟ ಮಾಡಲಿಲ್ಲ. ರಾಜ್ಯ ಅಭಿವೃದ್ಧಿ ಆಗಬೇಕು ಎಂಬುದು ಅವರಿಗಿಲ್ಲ ಬದಲಿಗೆ ಅವರ ಅಭಿವೃದ್ಧಿಗೆ ಅಧಿಕಾರ ಬಯಸುತ್ತಿದ್ದಾರೆ. ಬಿಜೆಪಿಯರ ಕಾರ್ಯಕ್ರಮವೇ ಜನರ ದಾರಿ ತಪ್ಪಿಸುವುದು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com