Asian Games : ಬ್ಯಾಡ್ಮಿಂಟನ್ : ಸೆಮಿಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್, ಪಿ.ವಿ ಸಿಂಧು

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಜಕಾರ್ತಾದಲ್ಲಿ ರವಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಥಾಯ್ಲೆಂಡ್ ನ ರಚನಾಕ್ ಇಂಟನಾನ್ ವಿರುದ್ಧ 21-18, 21-16 ಪಾಯಿಂಟ್ ಗಳಿಂದ ಜಯಿಸಿ ಸೆಮಿಫೈನಲ್ ಗೆ ಕಾಲಿಟ್ಟಿದ್ದಾರೆ.

ರವಿವಾರ ನಡೆದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ನ ನಿಚಾವೊನ್ ಜಿಂದಾಪೊಲ್ ವಿರುದ್ಧ ಪಿ.ವಿ ಸಿಂಧು 21-16, 16-21, 21-14 ಪಾಯಿಂಟ್ ಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಅಡಿಯಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com