Asian Games : ಅಥ್ಲೆಟಿಕ್ಸ್ : 400 ಮೀ. ಓಟದಲ್ಲಿ ಬೆಳ್ಳಿ ಗೆದ್ದ ಹಿಮಾ ದಾಸ್, ಮೊಹಮ್ಮದ್ ಅನಸ್

ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ 8ನೇ ದಿನವಾದ ರವಿವಾರ, ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಎರಡು ರಜತ ಪದಕಗಳು ಲಭಿಸಿವೆ. ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಹಿಮಾ ದಾಸ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಹಿಮಾ ದಾಸ್ 50.79 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿ ಎರಡನೇ ಸ್ಥಾನ ಪಡೆದರು.

ಪುರುಷರ 400 ಓಟದ ಸ್ಪರ್ಧೆಯಲ್ಲಿ ಮೊಹಮ್ಮದ್ ಅನಸ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊಹಮ್ಮದ್ ಅನಸ್ 45.69 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಎರಡನೇ ಸ್ಥಾನ ಗಳಿಸಿದರು.

ಪ್ರಸಕ್ತ ಕ್ರೀಡಾಕೂಟದಲ್ಲಿ 7 ಬಂಗಾರ, 9 ಬೆಳ್ಳಿ ಹಾಗೂ 20 ಕಂಚಿನ ಪದಕಗಳನ್ನು ಜಯಿಸಿರುವ ಭಾರತ ಒಟ್ಟು 26 ಪದಕಗಳನ್ನು ಹೊಂದಿದೆ.

One thought on “Asian Games : ಅಥ್ಲೆಟಿಕ್ಸ್ : 400 ಮೀ. ಓಟದಲ್ಲಿ ಬೆಳ್ಳಿ ಗೆದ್ದ ಹಿಮಾ ದಾಸ್, ಮೊಹಮ್ಮದ್ ಅನಸ್

Leave a Reply

Your email address will not be published.

Social Media Auto Publish Powered By : XYZScripts.com