ಹೊಟ್ಟೆ ತುಂಬುವಷ್ಟು ಊಟ ಮಾಡಿ, ನಿಮ್ಮ ಕೈಲಾದಷ್ಟು ಹಣ ನೀಡಿ : ಶಿವಮೊಗ್ಗ ಹೋಟೆಲ್​ನಲ್ಲಿ ಬಂಪರ್​ ಆಫರ್​​

ಶಿವಮೊಗ್ಗ :  ಶಿವಮೊಗ್ಗದಲ್ಲಿ ಓಪನ್​ ಆದ ಶ್ರೀ ಅನ್ನಲಕ್ಷ್ಮಿ ಹೆಸರಿನಲ್ಲಿ ರೆಸ್ಟೋರೆಂಟ್ ನಲ್ಲಿ ಹೊಟ್ಟೆ ತುಂಬುವಷ್ಟು ಊಟ ಮಾಡಿ ನಿಮಗೆ ಎಷ್ಟು ಹಣ ಕೊಡಬೇಕು ಎನಿಸುತ್ತದೆಯೋ ಅಷ್ಟು ಹಣ ನೀಡಬಹುದು ಎಂದು ಹೋಟೆಲ್​ನಲ್ಲಿ ಬಂಪರ್​ ಆಫರ್​ ಬಿಟ್ಟಿದ್ದಾರೆ

 

ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ  ತೆರೆಯಲಾಗಿದ್ದು ಈ ಹೋಟೆಲ್​​ನಲ್ಲಿ ವರ್ಷದ 365 ದಿನವೂ ಈ ಆಫರ್ ಮುಂದುವರಿಯಲಿದೆ. ಮದ್ಯಾಹ್ನ 12.30ರಿಂದ 2.30ರವರೆಗೆ ಈ ರೆಸ್ಟೋರೆಂಟ್ ತೆರೆದಿರುತ್ತದೆ. ಈ ಹೋಟೆಲ್ ನಲ್ಲಿ ಅನ್ನ, ತರಕಾರಿ ಸಾಂಬಾರು, ಮಜ್ಜಿಗೆ ನೀಡಲಾಗುತ್ತದೆ. ಇದನ್ನು ಬಿಟ್ಟು ಇನ್ಯಾವುದೇ ವಿಧದ ಅಡುಗೆ ಇರುವುದಿಲ್ಲ. ನಿಮಗೆ ಎಷ್ಟು ಬೇಕೋ ಅಷ್ಟು ಊಟ ಮಾಡಿ ತಮ್ಮ ಮನಸ್ಸಿಗೆ ತೋಚಿದಷ್ಟು ಹಣ ನೀಡಬಹುದಂತೆ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ಹೋಟೆಲನ್ನು ತೆರೆಯಲಾಗಿದ್ದು, ಮೊದಲ ದಿನವೇ 600ಕ್ಕೂ ಅಧಿಕ ಮಂದಿಗೆ ಅನ್ನ ದಾಸೋಹ ನಡೆಸಿದ್ದಾರೆ.


ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಗೋವರ್ಧನ್ ಎಂಬುವವರು ಈ ಹೋಟೆಲನ್ನು ತೆರೆದಿದ್ದು, ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಈ ಹಿಂದೆ ಪ್ರತೀ ಸೋಮವಾರ ದೇವಾಲಯದಲ್ಲಿ ಊಟ ಹಾಕಿಸುತ್ತಿದ್ದೆ. ಬಳಿಕ ದೇವಸ್ಥಾನವನ್ನು ನವೀಕರಣಗೊಳಿಸಿದರು. ಆಗ ಅನ್ನದಾಸೋಹ ನಿಂತಿತ್ತು. ಆದ್ದರಿಂದ ಹೋಟೆಲ್ ಮಾಡುವ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೆ ಆಫರ್ ಇಲ್ಲದಿದ್ದಾಗ ಮಾಮೂಲಿ ದರಕ್ಕೆ ಬೇರೆ ಬೇರೆ ರೀತಿಯ ಆಹಾರವನ್ನೂ ತಯಾರಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com