Watch : ರಾಜಾಹುಲಿ​ ಗಡ್ಡಕ್ಕೆ ಬಿತ್ತು ಕತ್ತರಿ : ಇದಕ್ಕೆ ನಿಜವಾದ ಕಾರಣ ಏನು…?

ಸ್ಯಾಂಡಲ್​ವುಡ್​ನ ಮಾಸ್ಟರ್​ ಪೀಸ್​, ಕಿರಾತಕ ರಾಕಿಂಗ್​ ಸ್ಟಾರ್​ ಯಶ್​ ಮಗುವಂತೆ ಬೆಳೆಸಿದ್ದ ಗಡ್ಡ ಮತ್ತು ಉದ್ದ ಕೂದಲನ್ನು ಕಟ್​ ಮಾಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಟಾಕ್​ ಆಫ್​ ದಿ ಟೌನ್​ ಆಗಿದ್ದ ಅವರ ಗಡ್ಡಕ್ಕೆ ಕತ್ತರಿ ಬಿದ್ದಿದೆ. ಇದಕ್ಕೆ ನಿಜವಾದ ಕಾರಣ ಕಿರಾತಕ ಸಿನಿಮಾ ಅಂತೆ.

ಒಂದೊಂದು ಚಿತ್ರಗಳಲ್ಲೂ ಡಿಫ್​ರೆಂಟ್ ಲುಕ್​ನಲ್ಲಿ ಕಾಣುವ ರಾಜಹುಲಿ ಕೆಜಿಎಫ್​ ಸಿನಿಮಾಗಾಗಿ ಗಡ್ಡವನ್ನು ಬೆಳೆಸಿದ್ರು, ಸಿನಿಮಾ ಕಂಪ್ಲಿಟ್​ ಆದ ಮೇಲು ಯಶ್​ ಗಡ್ಡ ಯಾಕೆ ತೇಗಿತ್ತಿಲ್ಲ, ಯಾವಾಗ ಗಡ್ಡಕ್ಕೆ ಕತ್ತರಿ ಬೀಳುತ್ತೇ ಎಂದು ಸ್ವತಃ ಅವರ ಹೆಂಡತಿ ರಾಧಿಕಾಗೂ ಗೊತ್ತಿರಲಿಲ್ಲ, ಆದರೆ ಇದೀಗ ಯಶ್​ ಅವರ ಗಡ್ಡನ್ನು ತೆಗೆದಿದ್ದು, ಇದಕ್ಕೆ ನಿಜವಾದ ಕಾರಣ ಅವರ ಮುಂದಿನ ಚಿತ್ರ ಕಿರಾತಕ-2 ಎಂದು ತಿಳಿದುಬಂದಿದೆ.

ರಾಕಿಂಗ್​ ಸ್ಟಾರ್​ ಯಶ್​ರ ಉದ್ದ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಬಿದ್ದಿದ್ದು, ಯಶ್​ ತುಂಬಾ ಬೇಸರದಿಂದ ಗಡ್ಡ ಕತ್ತರಿಸಿದ್ದರು, ಆದರೆ ಪತ್ನಿ ರಾಧಿಕಾಗೆ ಗಂಡನ ಕ್ಯೂಟ್​ ಲುಕ್​ಗೆ ಫುಲ್​ ಖುಷ್​ ಆಗಿದ್ದಾರೆ. ಗುರುವಾರ ಯಶ್​ ಗಡ್ಡ. ಉದ್ದ ಕೂದಲನ್ನು ಕತ್ತರಿಸಿದ್ದು, ಅದನ್ನು ವಿಡಿಯೋ ಮಾಡಿ ರಾಜಹುಲಿ ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ. ಇದಕ್ಕೆ ಕಾರಣ ಕಿರಾತಕ -2 ಸಿನಿಮಾ ಕಾರಣ ಎಂದು ಯಶ್​ ಹೇಳಿದ್ದು, ಕಿರಾತಕ ಚಿತ್ರತಂಡಕ್ಕೆ ರಾಧಿಕಾ ಧನ್ಯವಾದ ತಿಳಿಸಿದರು.

Feeling incomplete without it……. but, welcome back says my wife 😉

Yash यांनी वर पोस्ट केले शुक्रवार, २४ ऑगस्ट, २०१८

ಯಶ್​ ಕೂದಲು ಕಟ್​ ಮಾಡಿಸಿದನ್ನು ಮೈ ನೇಮ ಈಸ್​ ಕಿರಾತಕ ಎಂದು ಸ್ಟಾರ್ಟ್​ ಆಗುವ ವಿಡಿಯೋ ವನ್ನು ಫೇಸ್​ಬುಕ್​ ನಲ್ಲಿ ಶೇರ್​ ಮಾಡಿದ್ದರು. ಆದರೆ ಯಶ್​ಗೆ ಉದ್ದ ಕೂದಲು, ಗಡ್ಡವನ್ನು ಕತ್ತರಿಸಲು ಇಷ್ಟ ಇರಲಿಲ್ಲ, ಇದೇ ಗಡ್ಡದ ಲುಕ್​ನಲ್ಲೇ ಕಿರಾತಕ ಸಿನಿಮಾನೂ ಮಾಡೋಣ ಎಂದ್ರು ಯಶ್​ ನಂಗೆ ಈ ಗಡ್ಡ ಬಿಡೋಕೆ ಇಷ್ಟ ಇಲ್ಲ ಅಂದ್ರೂ, ನಿರ್ದೆಶಕರ ಒತ್ತಾಯದ ಮೇರೆಗೆ, ಪತ್ನಿ ರಾಧಿಕಾ ಪಂಡಿತ್​​ ಖುಷಿಗಾಗಿ ಗಡಕ್ಕೆ ಕತ್ತರಿ ಹಾಕಿ ಮತ್ತೊಮ್ಮೆ ಕಿರಾತಕ ಆಗೋಕೆ ರೆಡಿಯಾಗಿದ್ದೇನೆ ಎಂದು ಹೇಳಿದ್ರು.

Leave a Reply

Your email address will not be published.

Social Media Auto Publish Powered By : XYZScripts.com