ಖರ್ಗೆ ಹೇಳಿದ್ದು ನನಗೆ ತುಂಬಾ ನೋವಾಗಿದೆ, ಕೂಡಲೇ ಕ್ಷಮೆ ಕೇಳಲಿ : ಕೆ.ಎಸ್​. ಈಶ್ವರಪ್ಪ

ಶಿವಮೊಗ್ಗ : ವಾಜಪೇಯಿ ಚಿತಾಭಸ್ಮದ ವಿಸರ್ಜನೆ ಮಾಡುವ ವಿಚಾರದಲ್ಲಿ ನಾಟಕ ನಿಲ್ಲಿಸಿ ಎಂದು ಖರ್ಗೆಯವರು ಹೇಳಿದ್ದು ತುಂಬಾ ನೋವಾಗಿದೆ ಎಂದು ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ವಾಜಪೇಯಿ ಚಿತಾಭಸ್ಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಬಿಜೆಪಿಯವರು ವಾಜಪೇಯಿ ಚಿತಾಭಸ್ಮದ ವಿಸರ್ಜನೆ ಮಾಡುವ ವಿಚಾರದಲ್ಲಿ ನಾಟಕ ನಿಲ್ಲಿಸಿ ಎಂದು ಖರ್ಗೆಯವರು ಹೇಳಿದ್ದು ತುಂಬಾ ನೋವಾಗಿದೆ. ದೇಶಕ್ಕೆ ಗಂಡಾಂತರ ಬಂದಾಗ ಪಾಕಿಸ್ತಾನದ ವಿರುದ್ದ ಭಾರತ ಯುದ್ಧ ಮಾಡುತ್ತಿದ್ದಾಗ ಇಂದಿರಾ ಗಾಂಧಿಯವರನ್ನು ವಾಜಪೇಯಿ ಮಾದುರ್ಗೆಗೆ ಹೋಲಿಸಿದ್ದರು..ಆದ್ರೆ ಇಂದು ಕಾಂಗ್ರೆಸ್ ಮಿತ್ರರು ವಾಜಪೇಯಿ ಚಿತಾಭಸ್ಮ ವಿಚಾರದಲ್ಲಿ ರಾಜಕೀಯಗೊಳಿಸಿ ಮಾತನಾಡಿರುವುದು ತುಂಬಾ ನೋವಾಗಿದೆ. ಕೂಡಲೇ ಕಾಂಗ್ರೆಸ್ ಮುಖಂಡರು ಕ್ಷಮೆ ಕೇಳಬೇಕೆಂದು ಕೆ.ಎಸ್ ಈಶ್ವರಪ್ಪ ಒತ್ತಾಯಿಸಿದ್ರು..

Leave a Reply

Your email address will not be published.

Social Media Auto Publish Powered By : XYZScripts.com