ಕೊಪ್ಪಳ : ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅವಹೇಳನಕಾರಿ ಪೋಸ್ಟ್ : ವ್ಯಕ್ತಿಯ ಬಂಧನ

ಕೊಪ್ಪಳ : ಅಂಬೇಡ್ಕರ್ ಹಾಗೂ ಭಾರತ ಸಂವಿಧಾನ ಕುರಿತು ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮುದೇನೂರಿನ ಶಾಮೀದ್ ಮುಲ್ಲಾ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾನೆ.

ಅವಹೇಳನಕಾರಿ ಪೋಸ್ಟ್‌ ಖಂಡಿಸಿದ ಹುಲಗಪ್ಪ ಕೆಸರಟ್ಟಿಗೆ ಬೆದರಿಕೆ ಕರೆ ಮಾಡಿದ್ದಾನೆ. ಪೋಸ್ಟ್‌ ಸಮರ್ಥಿಸಿಕೊಂಡು ಶಾಮಿದ್ ಮುಲ್ಲಾ ಅವಾಚ್ಯ ಪದಗಳಿಂದ ಹುಲಗಪ್ಪ ಕೆಸರಟ್ಟಿಗೆ ನಿಂದಿಸಿದ್ದಾನೆ.

ತಾವರಗೇರಾ ಪೊಲೀಸ್ ಠಾಣೆಯಲ್ಲಿ ದೂರು ಹುಲಗಪ್ಪ ನೀಡಿದ್ದಾನೆ. ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಶಾಮೀದ್ ಮುಲ್ಲಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published.