ಬೆಳಗ್ಗೆ ಸಾಲ ಪಡೆದು ಸಂಜೆ ತೀರಿಸುವಂತ ಹೊಸ ಯೋಜನೆ ಜಾರಿಗೆ ತರುತ್ತೇನೆ : ಸಿಎಂ HDK

ಬೆಂಗಳೂರು : ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ. ಅಂತಹದ್ದೊಂದು ಹೊಸ ಯೋಜನೆ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಉತ್ತರ ಹಳ್ಳಿಯಲ್ಲಿನ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮ ವೇಳೆ ಮಾತನಾಡಿದ ಸಿಎಂ, ಮೊಬೈಲ್ ಬ್ಯಾಂಕಿಂಗ್ ಯೋಜನೆ ಜಾರಿಗೆ ತರುತ್ತೇನೆ. ಅದರಿಂದ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ.   1 ದಿನದ ಮಟ್ಟಿಗೆ ಸಾಲ ನೀಡೋ ಯೋಜನೆ ಜಾರಿ ತರುತ್ತೇನೆ. ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ ಹೊಸ ಯೋಜನೆ ಜಾರಿಗೆ ತರುತ್ತೇನೆ. ಇದಕ್ಕೆ ಯಾವುದೇ ರೀತಿಯ ಬಡ್ಡಿ ಹಾಕುವುದಿಲ್ಲ ಎಂದು ಹೇಳಿದರು.

ಕೆಲವೇ ದಿನಗಳಲ್ಲಿ ಹಲವು ಬದಲಾವಣೆ ಮಾಡಲಿದ್ದೇನೆ. ಸಹಕಾರ ನೀಡಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡರು. ನನ್ನ ವಿರುದ್ಧ ಹಲವು ಟೀಕೆಗಳು ಬರುತ್ತಿದೆ. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ, ನನ್ನ ಕೆಲಸ ನಾನು ಮಾಡುತ್ತೇನೆ, ಎಂದು  ತಿಳಿಸಿದ್ರು.

Leave a Reply

Your email address will not be published.